ADVERTISEMENT

ಕೋವಿಡ್-19 | ಮುಂದಿನ ವರ್ಷ ದೇಶದಲ್ಲಿ ದಿನಕ್ಕೆ 2.87 ಲಕ್ಷ ಮಂದಿಗೆ ಸೋಂಕು

ಪಿಟಿಐ
Published 8 ಜುಲೈ 2020, 13:20 IST
Last Updated 8 ಜುಲೈ 2020, 13:20 IST
ವೈರಸ್‌
ವೈರಸ್‌   

ನವದೆಹಲಿ:ಕೊರೊನಾವೈರಸ್‌ಗೆಲಸಿಕೆ ಲಭ್ಯವಾಗದಿದ್ದರೆ,2021ರ ಚಳಿಗಾಲದ ಅಂತ್ಯದ ವೇಳೆಗೆ ಭಾರತದಲ್ಲಿದಿನಕ್ಕೆ ಸುಮಾರು 2.87 ಲಕ್ಷ ಕೊರೊನಾ ಸೋಂಕು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಎಂಐಟಿ) ಸಂಶೋಧಕರು ತಿಳಿಸಿದ್ದಾರೆ.

ಸುಮಾರು 84 ದೇಶಗಳ ಪರೀಕ್ಷಾ ಸಾಮರ್ಥ್ಯ, ನೈಜ ದತ್ತಾಂಶ ಆಧರಿಸಿ ಅಧ್ಯಯನ ಮಾಡಲಾಗಿದ್ದು, ಸಂಶೋಧಕರು ಸಾಂಕ್ರಾಮಿಕ ರೋಗ ನಿವಾರಣೆಗೆ ಅನುಕೂಲಕರವಾದ ಸುಧಾರಿತ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಎಂಐಟಿ ಪ್ರಾಧ್ಯಾಪಕರಾದ ಹಜೀರ್‌ರಹಮಂಡಾದ್, ಜಾನ್‌ಸ್ಟರ್ಮನ್, ಸಂಶೋಧನಾ ವಿದ್ಯಾರ್ಥಿ ತ್ಸೆ ಯಾಂಗ್ ಲಿಮ್ ಈ ಅಧ್ಯಯನ ನಡೆಸಿದ್ದಾರೆ.ಭಾರತ ಸೇರಿದಂತೆ ಅಮೆರಿಕ, ದಕ್ಷಿಣ ಆಫ್ರಿಕಾ, ಇರಾನ್‌, ಇಂಡೊನೇಷ್ಯಾ, ಇಂಗ್ಲೆಂಡ್‌, ನೈಜೀರಿಯಾ, ಟರ್ಕಿ, ಫ್ರಾನ್ಸ್‌, ಜರ್ಮನಿ ದೇಶಗಳಲ್ಲಿ ಮುಂದಿನ ಚಳಿಗಾಲದ ವೇಳೆಯಲ್ಲಿ ಸೋಂಕು ಪ್ರಕರಣ ವ್ಯಾಪಕವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಅಂದಾಜುಗಳು ಬಹಳ ಸೂಕ್ಷ್ಮವಾಗಿದ್ದು, ಆರೋಗ್ಯ ತಪಾಸಣಾ ಕ್ರಮಗಳು ಮತ್ತು ಜನರ ವರ್ತನೆ ಹಾಗೂ ಸರ್ಕಾರದ ನೀತಿ ನಿರೂಪಣೆಗಳ ಮೇಲೆ ಅವಲಂಬಿತವಾಗಿರುತ್ತವೆ.

ವ್ಯಾಪಕವಾಗಿ ಸೋಂಕು ಪತ್ತೆ ತಪಾಸಣೆ ಮತ್ತು ಜನರು ಅಂತರ ಕಾಯ್ದುಕೊಳ್ಳುವುದರಿಂದ ಸೋಂಕು ನಿಯಂತ್ರಣವಾಗುತ್ತದೆ. ಆದರೆ, ಕೊರೊನಾ ಸೋಂಕಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೆ ಸೋಂಕು ವ್ಯಾಪಕವಾಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.