ADVERTISEMENT

ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿ: ವಿ.ಮುರಳೀಧರನ್

ನ್ಯೂಯಾರ್ಕ್‌ನಲ್ಲಿ ಸ್ವಾತಂತ್ರ್ಯೋತ್ಸವ; ವರ್ಚುವಲ್ ಕವಿ ಸಮ್ಮೇಳನ

ಪಿಟಿಐ
Published 16 ಆಗಸ್ಟ್ 2020, 9:54 IST
Last Updated 16 ಆಗಸ್ಟ್ 2020, 9:54 IST
ವಿ.ಮುರಳೀಧರನ್
ವಿ.ಮುರಳೀಧರನ್   

ನ್ಯೂಯಾರ್ಕ್: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಮುಂಚೂಣಿ ವಾರಿಯರ್ಸ್‌ಗಳನ್ನು ಎಲ್ಲರೂ ಕಡ್ಡಾಯವಾಗಿ ಗೌರವಿಸಬೇಕು ಎಂದು ಸಂಸದೀಯ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದರು.

74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಂಗವಾಗಿಜೈಪುರ್‌ ಫೂಟ್‌ ಯುಎಸ್‌ಎ ಆಯೋಜಿಸಿದ್ದ ’ವರ್ಚುವಲ್ ಕವಿ ಸಮ್ಮೇಳನ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಢಿದ ಅವರು, ’ಕೋವಿಡ್‌ 19 ಸೋಂಕಿನ ಕಾರಣದಿಂದಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿಲ್ಲ. ಆದರೂ ಈ ಸಾಂಕ್ರಾಮಿಕ ರೋಗ ನಮ್ಮಗಳ ಉತ್ಸಾಹ ಕುಗ್ಗಿಸಿಲ್ಲ. ಇಲ್ಲಿನ ಭಾರತೀಯ ಸಮುದಾಯಗಳು ಆನ್‌ಲೈನ್‌ ಮೂಲಕ ಸ್ವಾಂತಂತ್ರ್ಯೋತ್ಸವ ಆಚರಣೆಗೆ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ನಡುವೆಯೂ ಹೀಗೆ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿರುವುದಕ್ಕೆ ಮುಂಚೂಣಿ ವಾರಿಯರ್ಸ್‌ಗಳ ಪರಿಶ್ರಮವೇ ಕಾರಣ. ಹಾಗಾಗಿ ಅವರೆಲ್ಲರಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.