ADVERTISEMENT

ಪಿಒಕೆ ಮರಳಿ ಪಡೆಯಲು ಯುದ್ಧ ಮಾಡುವುದು ನಮ್ಮ ಹಕ್ಕು: ಮಾಜಿ ಸೇನಾಧಿಕಾರಿ

ಪಿಟಿಐ
Published 16 ಮೇ 2025, 16:31 IST
Last Updated 16 ಮೇ 2025, 16:31 IST
   

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ನಂತರ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವು, ಹೊಸಕಾಲದ ಯುದ್ಧ ತಂತ್ರಗಳಲ್ಲಿ ಡ್ರೋನ್ ಹಾಗೂ ಸೈಬರ್ ದಾಳಿಗಳು ಭವಿಷ್ಯದ ಯುದ್ಧ ತಂತ್ರಗಳ ಭಾಗ ಎಂಬುದರ ಮುನ್ನುಡಿಯಾಗಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಅನಿಲ್ ಕುಮಾರ್ ಭಟ್ ತಿಳಿಸಿದರು.

ಈ ಬಾರಿ, ಭಾರತಕ್ಕೆ ಮೇಲುಗೈ ಸಾಧಿಸುವ ಎಲ್ಲಾ ಅವಕಾಶವಿತ್ತು. ಆದರೆ, ನಾಲ್ಕೇ ದಿನಗಳಲ್ಲಿ ಸಂಧಾನ ಮಾಡಿಕೊಳ್ಳುವ ಮೂಲಕ ಪಾಕ್- ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಅವಕಾಶವನ್ನು ಭಾರತ ತಪ್ಪಿಸಿಕೊಂಡಿತು. ಪಿಒಕೆ ಸಮಸ್ಯೆ ಬಗೆ ಹರಿಯಲು ಯುದ್ಧವೇ ಕೊನೆಯ ಆಯ್ಕೆಯಾಗಿತ್ತು ಎಂದರು.

ಪಿಒಕೆಯನ್ನು ಮರಳಿ ಪಡೆಯುವುದು ನಮ್ಮ ಹಕ್ಕು. ಭಾರತೀಯ ಸೇನೆ ಯಾವಾಗಲೂ ಅದಕ್ಕೆ ಸಿದ್ಧವಾಗಿರುತ್ತದೆ ಎಂದರು.

ADVERTISEMENT

2017ರಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಕುಮಾರ್ ಅವರು ಭಾರತೀಯ ಸೇನೆಯ ಡಿಜಿಎಂಒ ಆಗಿ ಕೂಡ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.