ADVERTISEMENT

ಕೋವಿಡ್‌-19: ಸತತ 27ನೇ ದಿನವೂ 20 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣ

ಪಿಟಿಐ
Published 4 ನವೆಂಬರ್ 2021, 6:08 IST
Last Updated 4 ನವೆಂಬರ್ 2021, 6:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಕೋವಿಡ್‌ನ 12,885 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,43,21,025ಕ್ಕೇರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸತತ 27ನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆ 20ಸಾವಿರಕ್ಕಿಂತ ಕಡಿಮೆ ವರದಿಯಾಗುತ್ತಿರುವುದು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ 461 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಮೃತರ ಸಂಖ್ಯೆ 4,59,652ಕ್ಕೇರಿದಂತಾಗಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. 1,48,579 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಕೋವಿಡ್‌ ಪ್ರಕರಣಗಳ ಶೇ 0.43ರಷ್ಟಿವೆ. ಇವು ಕಳೆದ ವರ್ಷ ಮಾರ್ಚ್‌ ನಂತರ ವರದಿಯಾದ ಅತ್ಯಂತ ಕಡಿಮೆ ಸಂಖ್ಯೆಯ ಸಕ್ರಿಯ ಪ್ರಕರಣಗಳಾಗಿವೆ.

ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣ ಶೇ 98.23ರಷ್ಟಿದ್ದು, ಇದು ಕಳೆದ ವರ್ಷ ಮಾರ್ಚ್‌ ನಂತರ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ದೈನಿಕ ಕೋವಿಡ್‌ ದೃಢ ಪ್ರಮಾಣ ಶೇ 1.21ರಷ್ಟು ದಾಖಲಾಗಿದ್ದರೆ, ವಾರದ ಅವಧಿಯ ಪ್ರಮಾಣ ಶೇ 1.17ರಷ್ಟು ಎಂದೂ ಸಚಿವಾಲಯ ತಿಳಿಸಿದೆ.

ಈ ವರೆಗೆ ಕೋವಿಡ್‌ ಲಸಿಕೆಯ 107.63 ಡೋಸ್‌ಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.