
ನವದೆಹಲಿ: ‘ತೈವಾನ್ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸರ್ಕಾರದ ಮೂಲಗಳು ಮಂಗಳವಾರ ಸ್ಪಷ್ಟಪಡಿಸಿವೆ.
‘ವಿಶ್ವದ ಇತರ ರಾಷ್ಟ್ರಗಳಂತೆ, ಭಾರತ ಕೂಡ ತೈವಾನ್ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಆರ್ಥಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಒಪ್ಪಂದಗಳ ಮೇಲೆ ಈ ಸಂಬಂಧ ಕೇಂದ್ರೀಕೃತವಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಇವೇ ಮೂಲಗಳು ತಿಳಿಸಿವೆ.
ಸಚಿವ ಎಸ್.ಜೈಶಂಕರ್ ಅವರು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.
‘ಭಾರತವು ತೈನಾನ್‌ಅನ್ನು ಚೀನಾದ ಭಾಗವೆಂದು ಭಾರತ ಪರಿಗಣಿಸುತ್ತದೆ ಎಂಬುದಾಗಿ ಜೈಶಂಕರ್ ಅವರ ವಾಂಗ್ ಯಿ ಅವರಿಗೆ ಸೋಮವಾರದ ಸಭೆಯಲ್ಲಿ ಹೇಳಿದ್ದರು’ ಎಂಬುದಾಗಿ ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ಸ್ಪಷ್ಟನೆ ನೀಡಿದೆ.
ಈ ಬೆಳವಣಿಗೆಗಳ ನಂತರ, ‘ಜೈಶಂಕರ್ ಅವರ ಹೇಳಿಕೆಯನ್ನು ಚೀನಾ ವಿದೇಶಾಂಗ ಸಚಿವಾಲಯ ತಪ್ಪಾಗಿ ಉಲ್ಲೇಖಿಸಿತ್ತು’ ಎಂದೂ ಮೂಲಗಳು ಹೇಳಿವೆ.
ಚೀನಾ ಹೇಳಿಕೆ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದ ಸಚಿವ ಜೈಶಂಕರ್, ‘ಗಡಿ ವಿಚಾರವಾಗಿ ಭಾರತದೊಂದಿಗೆ ಯಾವ ರೀತಿ ಚೀನಾ ವ್ಯವಹರಿಸುತ್ತಿದೆಯೋ ಅದೇ ರೀತಿ ತೈವಾನ್‌ನೊಂದಿಗೂ ವ್ಯವಹರಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.