ದೆಹಲಿ: ಭಾರತದಲ್ಲಿ ಇಂದು 14,313 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 181 ಮಂದಿ ಮೃತಪಟ್ಟಿದ್ದಾರೆ.
ಈ ಪೈಕಿ ಕೇರಳವೊಂದರಲ್ಲೇ6,996 ಪ್ರಕರಣಗಳು ವರದಿಯಾಗಿವೆ. ಈ 24 ಗಂಟೆಗಳಲ್ಲಿ ಅಲ್ಲಿ 84 ಮಂದಿ ಸಾವಿಗೀಡಾಗಿದ್ದಾರೆ.
ಇನ್ನು ಭಾರತದ ಒಟ್ಟಾರೆ ಸೋಂಕು ಪ್ರಕರಣ ಅ.12ರ ಹೊತ್ತಿಗೆ3,39,85,920ಗೆ ತಲುಪಿದ್ದು, ಸದ್ಯ 2,14,900 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರೆಗೆ3,33,20,057 ಗುಣಮುಖರಾಗಿದ್ದು, ಸಾವಿನ ಸಂಖ್ಯೆ4,50,963 ಕ್ಕೆ ತಲುಪಿದೆ.
ದೇಶದಲ್ಲಿ ಈ ವರೆಗೆ95,89,78,049 ಮಂದಿಗೆ ಲಸಿಕೆ ಹಾಕಲಾಗಿದೆ. 24 ಗಂಟೆಗಳ ಅವಧಿಯಲ್ಲಿ65,86,092 ಮಂದಿಗೆ ಲಸಿಕೆ ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.