ADVERTISEMENT

Covid-19 India Update: 24 ಗಂಟೆಗಳಲ್ಲಿ 42,942 ಮಂದಿ ಗುಣಮುಖ, 290 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2021, 4:54 IST
Last Updated 7 ಸೆಪ್ಟೆಂಬರ್ 2021, 4:54 IST
ಕೋಲ್ಕತ್ತದ ಕೊಳಗೇರಿ ಪ್ರದೇಶವೊಂದರಲ್ಲಿ ಕೋವಿಡ್‌ ಪರೀಕ್ಷೆಗಾಗಿ ಆರೋಗ್ಯ ಕಾರ್ಯಕರ್ತರೊಬ್ಬರು ಮಕ್ಕಳ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು
ಕೋಲ್ಕತ್ತದ ಕೊಳಗೇರಿ ಪ್ರದೇಶವೊಂದರಲ್ಲಿ ಕೋವಿಡ್‌ ಪರೀಕ್ಷೆಗಾಗಿ ಆರೋಗ್ಯ ಕಾರ್ಯಕರ್ತರೊಬ್ಬರು ಮಕ್ಕಳ ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು   

ನವದೆಹಲಿ: ಭಾರತದಾದ್ಯಂತ 24 ಗಂಟೆಗಳ ಅಂತರದಲ್ಲಿ ಮಂಗಳವಾರ ಬೆಳಿಗ್ಗೆ 8ರವರೆಗೂ ಕೋವಿಡ್‌–19 ದೃಢಪಟ್ಟ 31,222 ಹೊಸ ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಯಲ್ಲಿ ಸೋಂಕಿನಿಂದ 42,942 ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ 97.48ರಷ್ಟಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ಪ್ರಸ್ತುತ 3,92,864 ಪ್ರಕರಣಗಳು ಸಕ್ರಿಯವಾಗಿವೆ. ವಾರದಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2.56ರಷ್ಟಿದೆ ಹಾಗೂ ಕಳೆದ 74 ದಿನಗಳಲ್ಲಿ ಶೇ 3ಕ್ಕಿಂತಲೂ ಕಡಿಮೆ ದಾಖಲಾಗಿದೆ.

ADVERTISEMENT

ದೇಶದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3,30,58,843ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,22,24,937 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ 4,41,042 ಮಂದಿ ಮೃತಪಟ್ಟಿದ್ದಾರೆ. 24 ಗಂಟೆಗಳಲ್ಲಿ ಕೋವಿಡ್‌ ಕಾರಣಗಳಿಂದಾಗಿ 290 ಮಂದಿ ಸಾವಿಗೀಡಾಗಿದ್ದಾರೆ.

ದೇಶದಾದ್ಯಂತ ಈವರೆಗೂ 69,90,62,776 ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.