ADVERTISEMENT

Covid-19 India Update: ದೇಶದಲ್ಲಿ 39,097 ಹೊಸ ಪ್ರಕರಣಗಳು, 546 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2021, 4:48 IST
Last Updated 24 ಜುಲೈ 2021, 4:48 IST
ಕೊರೊನಾ ವೈರಸ್‌ ಸೋಂಕಿತರೊಬ್ಬರ ಜೊತೆ ಆರೋಗ್ಯ ಸಿಬ್ಬಂದಿ ಮಾತನಾಡುತ್ತಿರುವುದು–ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್‌ ಸೋಂಕಿತರೊಬ್ಬರ ಜೊತೆ ಆರೋಗ್ಯ ಸಿಬ್ಬಂದಿ ಮಾತನಾಡುತ್ತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಶನಿವಾರ ಬೆಳಗ್ಗಿನವರೆಗೂ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 39,097 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 35,087 ಮಂದಿ ಚೇತರಿಸಿಕೊಂಡಿದ್ದು, 546 ಮಂದಿ ಸಾವಿಗೀಡಾಗಿದ್ದಾರೆ.

ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,05,03,166 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ.97.35 ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.31ರಷ್ಟಿದೆ. ವಾರದಲ್ಲಿ ದೃಢಪಟ್ಟ ಹೊಸ ಪ್ರಕರಣಗಳ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ ಶೇ.2.22 ದಾಖಲಾಗಿದೆ. ಸತತ 33 ದಿನಗಳಿಂದ ಕೋವಿಡ್‌ ದೃಢ ಪ್ರಮಾಣವು ಶೇ.3ಕ್ಕಿಂತ ಕಡಿಮೆ ದಾಖಲಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ಈವರೆಗೂ ಕೋವಿಡ್‌ ಕಾರಣಗಳಿಂದಾಗಿ 4,20,016 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 4,08,977 ಪ್ರಕರಣಗಳು ಸಕ್ರಿಯವಾಗಿವೆ. ದೇಶದಾದ್ಯಂತ ಒಟ್ಟು 42,78,82,261 ಡೋಸ್ ಲಸಿಕೆ ಹಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.