ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಬುಧವಾರ 58 ಸಾವಿರದಷ್ಟು ಪ್ರಕರಣಗಳು ವರದಿಯಾಗಿದ್ದರೆ, ಇಂದು 90,928 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಭಾರತದ ಪಾಸಿಟಿವಿಟಿ ದರ ಶೇ 6.43ಕ್ಕೆ ತಲುಪಿದ್ದು, ಆತಂಕ ಉಂಟುಮಾಡಿದೆ.
ಇನ್ನು ಈ 24 ಗಂಟೆಗಳಲ್ಲಿ 325 ಮಂದಿ ಮೃತಪಟ್ಟಿರುವುದು ಸರ್ಕಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ. ಸಾವಿನ ಒಟ್ಟು ಸಂಖ್ಯೆ 4,82,876ಕ್ಕೆ ತಲುಪಿದೆ.
ಸದ್ಯ ದೇಶದಲ್ಲಿ 2,85,401 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 3,43,41,009 ಮಂದಿ ಗುಣಮುಖರಾಗಿದ್ದಾರೆ.
ಇನ್ನೊಂದೆಡೆ ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.