ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ: ಭಾರತ, ರಷ್ಯಾ ರಕ್ಷಣಾ ಸಚಿವರಿಂದ ಸಭೆ

ಪಿಟಿಐ
Published 4 ಡಿಸೆಂಬರ್ 2025, 19:48 IST
Last Updated 4 ಡಿಸೆಂಬರ್ 2025, 19:48 IST
–
   

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಭಾರತ ಹಾಗೂ ರಷ್ಯಾ ಗುರುವಾರ ನಿರ್ಧರಿಸಿವೆ.

ತನ್ನ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ರಷ್ಯಾದಿಂದ ಹೆಚ್ಚುವರಿಯಾಗಿ ಎಸ್‌–400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಭಾರತ ಹೇಳಿದೆ.

23ನೇ ರಷ್ಯಾ–ಭಾರತ ವಾರ್ಷಿಕ ಶೃಂಗಸಭೆಗೂ ಉಭಯ ದೇಶಗಳ ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಹಾಗೂ ಆ್ಯಂಡ್ರಿ ಬೆಲಾಸೋವ್‌ ಅವರ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

ADVERTISEMENT

‘ಆಪರೇಷನ್‌ ಸಿಂಧೂರ ವೇಳೆ ಎಸ್‌–400 ಕ್ಷಿಪಣಿ ವ್ಯವಸ್ಥೆ ಪರಿಣಾಮಕಾರಿಯಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಹೀಗಾಗಿ ಮತ್ತಷ್ಟು ಇಂತಹ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸುವುದಾಗಿ ಭಾರತ ಈ ಸಭೆಯಲ್ಲಿ ಹೇಳಿತು’ ಎಂದು ಮೂಲಗಳು ಹೇಳಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.