ADVERTISEMENT

ಭಾರತದ ಹಡಗು ನಿಗ್ರಹ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ
Published 18 ಮೇ 2022, 12:34 IST
Last Updated 18 ಮೇ 2022, 12:34 IST
ಡಿಆರ್‌ಡಿಒ ಮತ್ತು ಭಾರತೀಯ ನೌಕಾದಳವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಡಗು ನಿಗ್ರಹ ಕ್ಷಿಪಣಿಯನ್ನು ಬುಧವಾರ ನೌಕಾ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪರೀಕ್ಷಿಸಲಾಯಿತು  –ಪಿಟಿಐ ಚಿತ್ರ
ಡಿಆರ್‌ಡಿಒ ಮತ್ತು ಭಾರತೀಯ ನೌಕಾದಳವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಡಗು ನಿಗ್ರಹ ಕ್ಷಿಪಣಿಯನ್ನು ಬುಧವಾರ ನೌಕಾ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪರೀಕ್ಷಿಸಲಾಯಿತು  –ಪಿಟಿಐ ಚಿತ್ರ   

ಬಾಲಸೋರ್, ಒಡಿಶಾ (ಪಿಟಿಐ):ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಡಗು ನಿಗ್ರಹ ಕ್ಷಿಪಣಿಯನ್ನು ಬುಧವಾರ ಒಡಿಶಾದ ಚಾಂಡಿಪುರದಲ್ಲಿ ನೌಕಾ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಯಿತು ಎಂದುಡಿಆರ್‌ಡಿಒ ಪ್ರಕಟಣೆ ತಿಳಿಸಿವೆ.

ಈ ಯೋಜನೆಯು ತನ್ನೆಲ್ಲಾ ಗುರಿಗಳನ್ನು ಪೂರ್ಣಗೊಳಿಸಿದೆ. ತನ್ನ ಪಥದಲ್ಲಿ ಚಲಿಸುವ ಮೂಲಕ ನಿಖರತೆ ಮತ್ತು ನಿಯಂತ್ರಿತವಾಗಿ ತನ್ನ ನಿರ್ದಿಷ್ಟ ಗುರಿಯನ್ನು ತಲುಪಿದೆ ಎಂದು ಬುಧವಾರ ಡಿಆರ್‌ಡಿಒ ತಿಳಿಸಿದೆ.

ಈ ಕ್ಷಿಪಣಿ ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿಹೆಲಿಕಾಪ್ಟರ್‌ಗಳಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಾಂಚರ್‌ ಕೂಡ ಒಂದಾಗಿದೆ. ಅಲ್ಲದೆಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಅನ್ನೂ ಇದು ಒಳಗೊಂಡಿದೆ. ಕ್ಷಿಪಣಿ ಉಡಾವಣೆ ವೇಳೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ADVERTISEMENT

ಈ ಯಶಸ್ವಿಗಾಗಿರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ತಂಡವನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.