ನವದೆಹಲಿ/ಬಾಲೇಶ್ವರ:ಅತ್ಯಂತ ನಿಖರವಾಗಿ 5 ಸಾವಿರ ಕಿ.ಮೀ. ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಮಧ್ಯಮ ಶ್ರೇಣಿಯ ’ಅಗ್ನಿ–5’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಬುಧವಾರ ಯಶಸ್ವಿಯಾಗಿ ನಡೆಸಿದೆ.
ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ಐಟಿಆರ್) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
‘ಚೀನಾದ ಉತ್ತರ ಭಾಗ, ಯುರೋಪಿನ ಕೆಲವು ವಲಯಗಳು ಸೇರಿದಂತೆ ಇಡೀ ಏಷ್ಯಾವನ್ನೇ ತನ್ನ ದಾಳಿಯ ವ್ಯಾಪ್ತಿಯೊಳಗೆ ತರುವ ಸಾಮರ್ಥ್ಯವನ್ನು ‘ಅಗ್ನಿ–5’ ಕ್ಷಿಪಣಿ ಹೊಂದಿದೆ.
ಭಾರತ–ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ತಿಳಿಗೊಂಡ ಮೂರೂವರೆ ತಿಂಗಳ ಒಳಗಾಗಿಯೇ ಭಾರತ ಈ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ. ಹಲವು ಗುರಿಗಳನ್ನು ಸ್ವತಂತ್ರವಾಗಿ ಭೇದಿಸಿ ಮತ್ತೆ ವಾಪಸ್ಸಾಗುವ ಕ್ಷಿಪಣಿ ವಾಹಕ ತಂತ್ರಜ್ಞಾನವನ್ನು (ಎಂಐಆರ್‌ವಿ) ‘ಅಗ್ನಿ–5’ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.