ADVERTISEMENT

ಚೀನಾಗೆ ತಕ್ಕ ಉತ್ತರ: ರವಿಶಂಕರ್‌ ಪ್ರಸಾದ್

ಪಿಟಿಐ
Published 2 ಜುಲೈ 2020, 12:24 IST
Last Updated 2 ಜುಲೈ 2020, 12:24 IST
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್   

ಕೋಲ್ಕತ್ತ: ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಯಾರಾದರೂ ಕೆಟ್ಟ ದೃಷ್ಟಿ ಬೀರಿದರೆ, ಅದಕ್ಕೆ ತಕ್ಕಉತ್ತರ ನೀಡುವ ಸಾಮರ್ಥ್ಯ ದೇಶಕ್ಕಿದೆ ಎಂದುಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ಗುರುವಾರ ತಿಳಿಸಿದರು.

ದೇಶ ದೃಢವಾದ ನಾಯಕತ್ವವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ ಅವರು, ದೇಶದ 20 ಯೋಧರು ಮಡಿದಿದ್ದಾರೆ, ಚೀನಿಯರ ಕಡೆ ಮೃತರ ಸಂಖ್ಯೆ ಇದರ ದುಪ್ಪಟ್ಟಾಗಿರುತ್ತದೆ ಎಂದು ಹೇಳಿದರು.

ಈಗ ನಿಮಗೆ ಎರಡು ‘ಸಿ’ ಮಾತ್ರ ಕೇಳಿಸುತ್ತಿದೆ. ಒಂದು ಕೊರೊನಾ ಸೋಂಕು ಮತ್ತು ಚೀನಾ. ನಾವು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಆದರೆ, ಭಾರತದ ಮೇಲೆ ಯಾರಾದರೂ ವಕ್ರದೃಷ್ಟಿ ಬೀರಿದರೆ, ತಕ್ಕ ಉತ್ತರ ನೀಡುತ್ತೇವೆ ಎಂದು ಪ್ರತಿಪಾದಿಸಿದರು.

ADVERTISEMENT

ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ಚೀನಾ ಇನ್ನು ಹೇಳಿಕೊಂಡಿಲ್ಲ ಎಂಬುದನ್ನು ನೀವು ಗಮನಿಸಿರಬಹುದು ಎಂದು ಅವರು ತಮ್ಮ ಮಾತಿಗೆ ಸಮರ್ಥನೆಯಾಗಿ ಹೇಳಿದರು. ಅವರು ವಿಡಿಯೊ ಸಂವಾದದಲ್ಲಿ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.