ADVERTISEMENT

89 ಆ್ಯಪ್‌ ತೆಗೆದುಹಾಕಲು ಯೋಧರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:43 IST
Last Updated 9 ಜುಲೈ 2020, 16:43 IST

ನವದೆಹಲಿ: ಫೇಸುಬುಕ್‌, ಟ್ರೂಕಾಲರ್‌, ಪಬ್‌ಜಿ ಸೇರಿದಂತೆ 89 ಆ್ಯಪ್‌ಗಳನ್ನು ಸ್ಮಾರ್ಟ್‌ಫೋನ್‌ನಿಂದ ತೆಗೆದು ಹಾಕುವಂತೆ ಭಾರತೀಯ ಸೇನೆ ತನ್ನ ಯೋಧರಿಗೆ ಸೂಚಿಸಿದೆ.

ಮಾಹಿತಿ ಸೋರಿಕೆಯಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ಸಂದೇಶ ರವಾನಿಸುವ ವೀ ಚಾಟ್‌, ವೈಬರ್‌, ನಿಂಬಜ್‌ ಹಾಗೂ ನೆಟ್‌ವರ್ಕಿಂಗ್‌ ಜಾಲತಾಣಗಳಾದ ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಂ, ಸ್ನಾಪ್‌ಚಾಟ್‌ ಸೇರಿದಂತೆ 18 ವಿಭಾಗಗಳ ಮೇಲೆ ಸೇನೆ ನಿಗಾವಹಿಸಿದೆ.

ADVERTISEMENT

ಈ ಹಿಂದೆಯೂ ಇದೇ ರೀತಿಯ ಕ್ರಮವನ್ನು ಸೇನೆ ಕೈಗೊಂಡಿತ್ತು. ಆದರೆ, ಇದೇ ಮೊದಲ ಬಾರಿ ಅಪಾರ ಸಂಖ್ಯೆಯಲ್ಲಿ ಆ್ಯಪ್‌ಗಳನ್ನು ತೆಗೆದುಹಾಕಲು ಸೂಚಿಸಿದೆ.

ಏಳು ತಿಂಗಳ ಹಿಂದೆ ಭಾರತೀಯ ನೌಕಾಪಡೆ ಸಹ ಫೇಸ್‌ಬುಕ್‌ ಬಳಸದಂತೆ ಸೂಚಿಸಿತ್ತು. ಜತೆಗೆ ನೌಕಾನೆಲೆಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯದಂತೆ ಅಧಿಕಾರಿಗಳಿಗೆ ಮತ್ತು ಇತರ ಸಿಬ್ಬಂದಿಗೆ ಸೂಚಿಸಿತ್ತು.

ಭಾರತೀಯ ಸೇನೆ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಟ್ರೂಕಾಲರ್‌ ಕಂಪನಿಯ ವಕ್ತಾರರು, ’ಇದು ನಿರಾಸೆ ಮೂಡಿಸಿದೆ. ಟ್ರೂಕಾಲರ್‌ ಸ್ವಿಡನ್‌ ಮೂಲದ್ದಾಗಿದೆ. ಭಾರತವು ನಮ್ಮ ಮನೆ ಇದ್ದ ಹಾಗೆ. ಭಾರತೀಯ ಸೇನೆ ಬಗ್ಗೆ ಅಪಾರ ಗೌರವ ಇದೆ. ಟ್ರೂಕಾಲರ್‌ ಸುರಕ್ಷಿತ ಆ್ಯಪ್‌’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.