ADVERTISEMENT

ಸಿಕ್ಕಿಂನಲ್ಲಿ ಭೂಕುಸಿತ: 74 ಮಂದಿ ಪ್ರವಾಸಿಗರ ರಕ್ಷಣೆ

ಪಿಟಿಐ
Published 1 ಸೆಪ್ಟೆಂಬರ್ 2022, 15:53 IST
Last Updated 1 ಸೆಪ್ಟೆಂಬರ್ 2022, 15:53 IST
   

ಗ್ಯಾಂಗ್‌ಟಾಕ್‌: ಭೂಕುಸಿತ ಸಂಭವಿಸಿರುವ ಸಿಕ್ಕಿಂನ ಯುಮ್ತಾಂಗ್ ಕಣಿವೆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 74 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಯುಮ್ತಾಂಗ್ ಕಣಿವೆಯಿಂದ 19 ಕಿ.ಮೀ. ದೂರದಲ್ಲಿ ಭಾರಿ ಭೂಕುಸಿತ ಸಂಭವಿಸಿ, ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಅರಿತು ಯೋಧರು ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭೂಕುಸಿತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದೂ ಹೇಳಿದೆ.

ಪ್ರವಾಸಿಗರಿದ್ದ ಎಂಟು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದವು. ಮಹಿಳೆಯರು ಮತ್ತು ಮಕ್ಕಳೂ ಈ ವಾಹನಗಳಲ್ಲಿದ್ದರು ಎಂದೂ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.