ADVERTISEMENT

ಪಾಕ್‌ಗೆ ಮಾಹಿತಿ: ಯೋಧರ ಬಂಧನ

ಐಎಸ್‌ಐ ಏಜೆಂಟ್‌ ನಡೆಸಿದ ಹನಿಟ್ರ್ಯಾಪ್‌:

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:47 IST
Last Updated 6 ನವೆಂಬರ್ 2019, 20:47 IST

ಜೈಪುರ: ಪಾಕಿಸ್ತಾನದ ಮಹಿಳಾ ಐಎಸ್‌ಐ ಏಜೆಂಟ್‌ ನಡೆಸಿದ ಹನಿಟ್ರ್ಯಾಪ್‌ಗೆ ಸಿಲುಕಿ ಭಾರತೀಯ ಸೇನೆಗೆ ಸಂಬಂಧಪಟ್ಟ ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಇಬ್ಬರು ಯೋಧರನ್ನು ಬಂಧಿಸಲಾಗಿದೆ.

ರಾಜಸ್ಥಾನದ ಪೋಖ್ರಾನ್‌ನಲ್ಲಿ ನಿಯೋಜಿಸಲಾಗಿದ್ದ ಯೋಧರಾದ ರವಿ ವರ್ಮಾ ಮತ್ತು ವಿಚಿತ್ರ ಬೆಹ್ರಾ ಅವರ ಮೇಲೆ ಹಲವು ದಿನಗಳಿಂದ ನಿಗಾವಹಿಸಿ ಈ ಕ್ರಮಕೈಗೊಳ್ಳಲಾಗಿದೆ.

ಪೋಖ್ರಾನ್‌ನಿಂದ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಜೋಧಪುರ ರೈಲ್ವೆ ನಿಲ್ದಾಣದಲ್ಲಿ ಇಬ್ಬರನ್ನು ರಾಜಸ್ಥಾನ ಪೊಲೀಸ್ ಇಲಾಖೆಯ ಗುಪ್ತದಳ ಘಟಕ ಬಂಧಿಸಿದೆ. ಹೆಚ್ಚಿನ ವಿಚಾರಣೆಗೆ ಜೈಪುರಕ್ಕೆ ಕರೆದೊಯ್ಯಲಾಗಿದೆ.

ADVERTISEMENT

ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಮೂಲಕ ಪಾಕಿಸ್ತಾನದ ಮಹಿಳಾ ಏಜೆಂಟ್‌ ಜತೆ ಸಂಪರ್ಕದಲ್ಲಿದ್ದ ಇವರು, ಭಾರತೀಯ ಸೇನೆಗೆ ಸಂಬಂಧಪಟ್ಟ ರಹಸ್ಯ ಮಾಹಿತಿಗಳನ್ನು ಹಣಕ್ಕಾಗಿ ರವಾನಿಸುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಏಜೆಂಟ್‌ ಜತೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಫೇಸ್‌ಬುಕ್‌ ಮೂಲಕ ಸಂಪರ್ಕವಿತ್ತು. ಜತೆಗೆ ವಿಡಿಯೊ ಕಾಲ್‌ನಲ್ಲಿ ಮಾತುಕತೆ ನಡೆ ಯುತ್ತಿತ್ತು. ಸೇನೆಯ ಕುರಿತು ರವಾ ನಿಸಿದ ಮಾಹಿತಿ ಖಚಿತವಾಗಿದ್ದರೆ ಬ್ಯಾಂಕ್‌ ಖಾತೆಗೆ ಹಣ ಹಾಕಲಾಗುತ್ತಿತ್ತು ಎನ್ನುವುದನ್ನು ವಿಚಾರಣೆ ವೇಳೆ ಬೆಹ್ರಾ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರಹಸ್ಯ ಮಾಹಿತಿ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಬಳಿಕ ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.