ಜಮ್ಮು-ಕಾಶ್ಮೀರ: ಕೆರೆನ್ ಸೆಕ್ಟರ್‌ನಲ್ಲಿ ಶನಿವಾರದಿಂದಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆಯುತ್ತಿರುವಭೀಕರ ಹೋರಾಟದಲ್ಲಿಗಾಯಗೊಂಡ ಯೋಧರನ್ನು ವಾತಾವರಣ ವೈಪರೀತ್ಯದಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆಯಿಂದ ಒಳಗೆ ನುಸುಳಲು ಯತ್ನಿಸುತ್ತಿರುವ ಉಗ್ರರನ್ನು ಸದೆಬಡಿಯಲು ಸೇನೆಯು ನಡೆಸುತ್ತಿರುವ ಕಾರ್ಯಾಚರಣೆ ತೀವ್ರಗೊಂಡಿದ್ದು5 ಮಂದಿ ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಗಾಯಗೊಂಡಿರುವ ಶಂಕೆ ಇದ್ದು, ಐದು ಮಂದಿ ಯೋಧರೂ ಹುತಾತ್ಮರಾಗಿದ್ದಾರೆ.ಶನಿವಾರದಿಂದ ಭಾನುವಾರದವರೆಗೆನಡೆದ ಕಾರ್ಯಾಚರಣೆಯಲ್ಲಿ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದರು. ಕಾರ್ಯಾಚರಣೆಯ ತೀವ್ರತೆಯನ್ನು ಗಮನಿಸಿರುವ ಸೇನೆ ಹೆಚ್ಚಿನ ಯೋಧರನ್ನು ಈ ಭಾಗಕ್ಕೆ ನಿಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.