ADVERTISEMENT

ಬೂಕರ್ ಪ್ರಶಸ್ತಿ: ಆಯ್ಕೆ ಪಟ್ಟಿಯಲ್ಲಿ ಭಾರತೀಯ ಮೂಲದ ಲೇಖಕನ ಕಾದಂಬರಿ

ಪಿಟಿಐ
Published 27 ಜುಲೈ 2021, 8:59 IST
Last Updated 27 ಜುಲೈ 2021, 8:59 IST
ಸಂಜೀವ್‌ ಸಹೊತ          -ಟ್ವಿಟರ್‌ ಚಿತ್ರ
ಸಂಜೀವ್‌ ಸಹೊತ          -ಟ್ವಿಟರ್‌ ಚಿತ್ರ   

ಲಂಡನ್‌: 2021ನೇ ಸಾಲಿನ ಪ್ರತಿಷ್ಠಿತ ‘ಬೂಕರ್‌ ಪ್ರಶಸ್ತಿ‘ಗೆ ಗುರುತಿಸಿರುವ ಕಾದಂಬರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಬ್ರಿಟಿಷ್‌ ಲೇಖಕ ಸಂಜೀವ್‌ ಸಹೋತಾ ಅವರ ‘ಚೀನಾ ರೂಂ’ ಕಾದಂಬರಿಯೂ ಒಂದಾಗಿದೆ.

2021ರ ಪ್ರಶಸ್ತಿಗೆ 13 ಕಾದಂಬರಿಗಳ ದೀರ್ಘವಾದ ಪಟ್ಟಿಯೊಂದನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯನ್ನು ‘ದಿ ಬೂಕರ್‌ ಡಜನ್‌’ ಎಂದೂ ಕರೆಯಲಾಗುತ್ತದೆ. ಬ್ರಿಟನ್‌ ಅಥವಾ ಐರ್ಲ್ಯಾಂಡ್‌ನಲ್ಲಿ ಪ್ರಕಟವಾದ 158 ಕಾದಂಬರಿಗಳ ಪೈಕಿ ತೀರ್ಪುಗಾರರು ಈ 13 ಕಾದಂಬರಿಗಳನ್ನು ಆರಿಸಿದ್ದಾರೆ.

ಈ ಪಟ್ಟಿಯಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ ಕಜುಯೋ ಇಶಿಗರೊ ಮತ್ತು ಪುಲಿಟ್ಜರ್‌ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಅವರ ಕಾದಂಬರಿಗಳು ಕೂಡ ಸ್ಥಾನ ಪಡೆದಿವೆ.

ADVERTISEMENT

ಇಶಿಗರೊ ಅವರ ‘ಕ್ಲಾರಾ ಆ್ಯಂಡ್‌ ದಿ ಸನ್‌’ ಕಾದಂಬರಿ ಪ್ರೀತಿ ಮತ್ತು ಮಾನವೀಯತೆಗೆ ಸಂಬಂಧಿಸಿದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.