ನ್ಯೂಯಾರ್ಕ್: ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ 180ನೇ ಅಧ್ಯಕ್ಷರಾಗಿ ಭಾರತ ಮೂಲದ ವೈದ್ಯ ಬಾಬಿ ಮುಕ್ಕಾಮಲ ಅವರು ನೇಮಕಗೊಂಡಿದ್ದಾರೆ.
179 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಮೂಲದ ವ್ಯಕ್ತಿಯೊಬ್ಬರು ಈ ಅಧಿಕಾರ ಸ್ವೀಕರಿಸಿದ್ದಾರೆ.
ಓಟೊಲರಿಂಗೋಲಜಿಸ್ಟ್ (ಕಿವಿ, ಮೂಗು ಮತ್ತು ಗಂಟಲು ತಜ್ಞ) ಮುಕ್ಕಾಮಲ ಅವರು ಜೂನ್ 10ರಂದು ಪ್ರಮಾಣ ವಚನ ಸ್ವೀಕರಿಸಿದರು ಎಂದು ಅಸೋಸಿಯೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಮೆದುಳಿನಲ್ಲಿ 8 ಸೆಂ.ಮೀ. ಉದ್ದದ ಗಡ್ಡೆ ಇರುವುದು ಪತ್ತೆಯಾಗಿತ್ತು. ‘ಕೆಲವು ತಿಂಗಳ ಹಿಂದೆ, ಈ ದಿನ ಬರುತ್ತದೆಯೇ ಎಂದು ನಾನು ಊಹಿಸಿರಲಿಲ್ಲ’ ಎಂದು ಮುಕ್ಕಾಮಲ ಹೇಳಿದ್ದಾರೆ.
1970ರ ದಶಕದಲ್ಲಿ ಭಾರತದಿಂದ ಪೋಷಕರೊಂದಿಗೆ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದ ಮುಕ್ಕಾಮಲ ಅವರು ಕುಟುಂಬದೊಂದಿಗೆ ಮಿಚಿಗನ್‌ನ ಫ್ಲಿಂಟ್‌ನಲ್ಲಿ ವಾಸಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.