ADVERTISEMENT

ದೇಶವನ್ನು ಒಡೆಯುವುದು ದೇಶಭಕ್ತಿಯಲ್ಲ, ದೇಶ ಒಗ್ಗೂಡಿಸುವುದು ದೇಶಪ್ರೇಮ: ರಾಹುಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 9:52 IST
Last Updated 15 ನವೆಂಬರ್ 2022, 9:52 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೋಡೊ ಯಾತ್ರೆ ವೇಳೆ ತಾವು ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್‌, ‘ಹಣದುಬ್ಬರ ಹೆಚ್ಚಳ ದೇಶಭಕ್ತಿಯೇ?, ನಿರುದ್ಯೋಗ ಸಮಸ್ಯೆ ದೇಶಭಕ್ತಿಯೇ?, ತಪ್ಪಾದ ಜಿಎಸ್‌ಟಿ ದೇಶಭಕ್ತಿಯೇ?, ಚೀನಾ ಅತಿಕ್ರಮಣ ಕುರಿತು ಸುಳ್ಳು ಹೇಳುವುದು ದೇಶಭಕ್ತಿಯೇ’ ಎಂದು ಪ್ರಶ್ನಿಸಿದ್ದಾರೆ.

ದೇಶವನ್ನು ಒಡೆಯುವುದು ದೇಶಭಕ್ತಿಯಲ್ಲ, ದೇಶವನ್ನು ಒಗ್ಗೂಡಿಸುವುದು ದೇಶಪ್ರೇಮ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ರಾಹುಲ್‌ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯೂ 69ನೇ ದಿನಕ್ಕೆ ಕಾಲಿರಿಸಿದ್ದು, ಮಹಾರಾಷ್ಟ್ರದಲ್ಲಿ ಸಾಗುತ್ತಿದೆ. ಶಿವಸೇನಾ, ಎನ್‌ಸಿಪಿ ನಾಯಕರು ರಾಹುಲ್‌ಗೆ ಸಾಥ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.