ಪಿಟಿಐ
ನ್ಯೂಯಾರ್ಕ್:‘ಮೆಮರಿ ಲೀಗ್ ವಿಶ್ವ ಚಾಂಪಿಯನ್‌ಶಿಫ್–2025’ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿ ವಿಶ್ವಾ ರಾಜಕುಮಾರ್ ಅವರು ವಿಜೇತರಾಗಿದ್ದಾರೆ. 13.50 ಸೆಕೆಂಡ್‌ನಲ್ಲಿ ಅವರು 80 ಸಂಖ್ಯೆಗಳನ್ನು ಮತ್ತು 8.40 ಸೆಕೆಂಡ್‌ಗಳಲ್ಲಿ 30 ಚಿತ್ರಗಳನ್ನು ನೆನಪಿಟ್ಟುಕೊಂಡಿದ್ದರು.
‘ಮೆಮರಿ ಲೀಗ್ ವಿಶ್ವ ಚಾಂಪಿಯನ್‌ಶಿಫ್’ ಆನ್‌ಲೈನ್ ಸ್ಪರ್ಧೆಯಾಗಿದೆ. ವೆಬ್‌ಸೈಟ್ ಪ್ರಕಾರ ರಾಜ್‌ಕುಮಾರ್ ಅವರು 5000 ಸ್ಕೋರ್ ಮೂಲಕ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ರಾಜ್‌ಕುಮಾರ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪುದುಚೇರಿಯ ಮನಕುಲವಿನಯಗರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ.
‘ಸಾಕಷ್ಟು ನೀರು ಕುಡಿಯುವುದರಿಂದ ಮಿದುಳಿಗೆ ಸಹಾಯವಾಗುತ್ತದೆ. ವಸ್ತುಗಳನ್ನು ನೆನಪಿಟ್ಟುಕೊಳ್ಳುವ ಸಂದರ್ಭದಲ್ಲಿ ಸಾಮಾನ್ಯವಾಗಿ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿರುತ್ತೇವೆ. ಹೆಚ್ಚು ನೀರು ಕುಡಿಯುವುದರಿಂದ ಗಂಟಲು ಸ್ಪಷ್ಟವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.