ADVERTISEMENT

ಶಂಕಿತನಿಗಾಗಿ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಶೋಧ

ಪಿಟಿಐ
Published 3 ಮೇ 2025, 15:35 IST
Last Updated 3 ಮೇ 2025, 15:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಕೊಲಂಬೊ: ಪಹಲ್ಗಾಮ್‌ ದಾಳಿಯ ಜೊತೆ ನಂಟು ಹೊಂದಿರುವ ಶಂಕಿತನೊಬ್ಬ ಇದ್ದಿರಬಹುದು ಎಂಬ ಸುಳಿವು ಪಡೆದ ಶ್ರೀಲಂಕಾ ಪೊಲೀಸರು, ಚೆನ್ನೈನಿಂದ ಇಲ್ಲಿಗೆ ಶನಿವಾರ ಬಂದ ವಿಮಾನವೊಂದನ್ನು ತಪಾಸಣೆಗೆ ಒಳಪಡಿಸಿದರು.

ಕೊಲಂಬೊದ ಭಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ 11.59ಕ್ಕೆ ಚೆನ್ನೈನಿಂದ ಬಂದ ವಿಮಾನವನ್ನು ಸಮಗ್ರ ತಪಾಸಣೆಗೆ ಒಳಪಡಿಸಲಾಯಿತು ಎಂದು ಶ್ರೀಲಂಕನ್ ಏರ್‌ಲೈನ್ಸ್‌ನ ಪ್ರಕಟಣೆ ತಿಳಿಸಿದೆ.

ADVERTISEMENT

‘ಭಾರತಕ್ಕೆ ಬೇಕಾಗಿರುವ ಶಂಕಿತ ವ್ಯಕ್ತಿಯೊಬ್ಬ ಈ ವಿಮಾನದಲ್ಲಿ ಇದ್ದಾನೆ ಎಂದು ಭಾವಿಸಿ ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರದಿಂದ ಎಚ್ಚರಿಕೆಯ ಸಂದೇಶ ಬಂದಿತ್ತು. ಇದನ್ನು ಆಧರಿಸಿ ಸ್ಥಳೀಯ ಅಧಿಕಾರಿಗಳ ನೆರವು ಪಡೆದು ಶೋಧ ಕಾರ್ಯ ನಡೆಸಲಾಯಿತು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ವಿಮಾನವನ್ನು ಬಹಳ ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದ ನಂತರ, ಮುಂದಿನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಯಿತು. ಪಹಲ್ಗಾಮ್‌ ದಾಳಿಯಲ್ಲಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.