ADVERTISEMENT

Covid India Update: ಕೇರಳದಲ್ಲೂ ಹೆಚ್ಚಾಯ್ತು ಕೋವಿಡ್‌ ಸೋಂಕು

ರಾಯಿಟರ್ಸ್
Published 25 ಸೆಪ್ಟೆಂಬರ್ 2020, 16:22 IST
Last Updated 25 ಸೆಪ್ಟೆಂಬರ್ 2020, 16:22 IST
   

ನವದೆಹಲಿ: ಕೇರಳದಲ್ಲೂ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ 6,477 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 3,481 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಸೋಂಕಿನಿಂದ 1,11,331 ಮಂದಿ ಗುಣಮುಖರಾಗಿದ್ದು, 48,982 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ 17,794 ಹೊಸ ಪ್ರಕರಣಗಳು ವರದಿಯಾಗಿದ್ದು, 19,592 ಮಂದಿ ಗುಣಮುಖರಾಗಿದ್ದಾರೆ ಹಾಗೂ 416 ಮಂದಿ ಸಾವಿಗೀಡಾಗಿದ್ದಾರೆ. 2,72,775 ಸಕ್ರಿಯ ಪ್ರಕರಣಗಳಿವೆ ಹಾಗೂ ಈವರೆಗೂ 9,92,806 ಮಂದಿ ಗುಣಮುಖರಾಗಿದ್ದರೆ, 34,761 ಮಂದಿ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ 24 ಗಂಟೆಗಳಲ್ಲಿ 4,061 ಮಂದಿ ಗುಣಮುಖರಾಗಿದ್ದರೆ, 3,827 ಕೋವಿಡ್‌ ದೃಢಪಟ್ಟ ಪ್ರಕರಣಗಳು ದಾಖಲಾಗಿವೆ ಹಾಗೂ 24 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೂ 2,28,436 ಮಂದಿ ಗುಣಮುಖರಾಗಿದ್ದು, 30,867 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಆಂಧ್ರ ಪ್ರದೇಶದಲ್ಲಿ ಕೋವಿಡ್‌ ದೃಢಪಟ್ಟ 7,073 ಪ್ರಕರಣಗಳು, ಕರ್ನಾಟಕದಲ್ಲಿ 8,655, ತಮಿಳುನಾಡಿನಲ್ಲಿ 5,679, ಪಶ್ಚಿಮ ಬಂಗಾಳದಲ್ಲಿ 3,190, ಗುಜರಾತ್‌ನಲ್ಲಿ 1,442 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 1,218 ಪ್ರಕರಣಗಳು ದಾಖಲಾಗಿವೆ.

ಗುರುವಾರ ಬೆಳಗ್ಗಿನ ವರೆಗೂ ಪತ್ತೆಯಾಗಿರುವ 86,052 ಪ್ರಕರಣಗಳನ್ನೂ ಒಳಗೊಂಡಂತೆ ಭಾರತದ ಕೋವಿಡ್‌ ಪ್ರಕರಣಗಳ ಸಂಖ್ಯೆ 58,18,571ಕ್ಕೆ ಏರಿಕೆಯಾಗಿದೆ.

ಇದೇ 24 ಗಂಟೆಗಳಲ್ಲಿ ದೇಶದಲ್ಲಿ 1,141 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಕೋವಿಡ್‌ನಿಂದಾಗಿ ಈ ವರೆಗೆ 92,290 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.

ದೇಶದ ಒಟ್ಟು 58,18,571 ಕೋವಿಡ್‌ ಪ್ರಕರಣಗಳ ಪೈಕಿ ಸದ್ಯ 9,70,116 ಪ್ರಕರಣಗಳು ಸಕ್ರಿಯವಾಗಿದ್ದರೆ, 47,56,165 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನೆರಡು ದಿನಗಳಲ್ಲಿ 60 ಲಕ್ಷ?

ಇದಕ್ಕೂ ಹಿಂದೆ ಬುಧವಾರ ಬೆಳಗ್ಗೆ ಭಾರತದಲ್ಲಿ 83,347 ಪ್ರಕರಣಗಳು ವರದಿಯಾಗಿದ್ದವು, ಆಗ ದೇಶದ ಒಟ್ಟಾರೆ ಸೋಂಕು ಪ್ರಕರಣಗಳು 56,46,011ಕ್ಕೆ ಏರಿದ್ದವು. ಇಂದು 86,052 ಪ್ರಕರಣಗಳೊಂದಿಗೆ ಒಟ್ಟು ಕೋವಿಡ್‌ ಪ್ರಕರಣಗಳು58,18,571ಕ್ಕೆ ಏರಿದೆ. ಇದೇ ಲೆಕ್ಕದಂತೆ ಇನ್ನೆರಡು ದಿನಗಳಲ್ಲಿ ಭಾರತದ ಒಟ್ಟು ಕೋವಿಡ್‌ ಸಂಖ್ಯೆ 60 ಲಕ್ಷ ತಲುಪುವುದು ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.