ADVERTISEMENT

ಖಾಸಗಿ ಸ್ಟಾರ್ಟ್‌ಅಪ್‌ನ ಪ್ರಥಮ ಉಡಾವಣಾ ವಾಹಕ ಅನಾವರಣ

ಪಿಟಿಐ
Published 28 ನವೆಂಬರ್ 2022, 13:59 IST
Last Updated 28 ನವೆಂಬರ್ 2022, 13:59 IST

ನವದೆಹಲಿ (ಪಿಟಿಐ): ಖಾಸಗಿ ಸಂಸ್ಥೆಯು ವಿನ್ಯಾಸಗೊಳಿಸಿ, ನಿರ್ವಹಣೆ ಮಾಡಲಿರುವ ಭಾರತದ ಪ್ರಥಮ ಉಡಾವಣಾ ವಾಹಕವು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯಾರಂಭ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ ಸಂಸ್ಥೆಯಾಗಿರುವ ಅಗ್ನಿಕುಲ್‌ ಕಾಸ್ಮಸ್‌ ಇದನ್ನು ವಿನ್ಯಾಸಗೊಳಿಸಿದೆ.

ಸ್ಟಾರ್ಟ್ಅಪ್‌ನ ರೂಪುರೇಷೆಮದ್ರಾಸ್‌ನ ಐಐಟಿಯಲ್ಲಿ ಆರಂಭವಾಗಿತ್ತು. ಈ ವರ್ಷಾಂತ್ಯದ ವೇಳೆಗೆ ಉಡಾವಣಾ ವಾಹಕದ ಮೂಲಕವೇ ಅಗ್ನಿಬಾನ್‌ ರಾಕೆಟ್‌ ಉಡಾವಣೆ ಮಾಡಲು ಸ್ಟಾರ್ಟ್‌ಅಪ್‌ ಉದ್ದೇಶಿಸಿದೆ. ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು ಅಗ್ನಿಕುಲ್‌ ಉಡಾವಣಾ ವಾಹಕವನ್ನು ನ.25ರಂದು ಉದ್ಘಾಟಿಸಿದ್ದರು.

ಅಗ್ನಿಕುಲ್‌ ಕಾಸ್ಮಸ್‌ ವಿನ್ಯಾಸಗೊಳಿಸಿರುವ ಉಡಾವಣಾ ವಾಹಕವನ್ನು, ಇಸ್ರೊ ಮತ್ತು ಇನ್‌–ಸ್ಪೇಸ್‌ ನೆರವಿನಲ್ಲಿ ಕಾರ್ಯಚಾಲನೆ ಮಾಡಲಾಗುತ್ತದೆ. ಉಡಾವಣಾ ವಾಹಕವು ಅಗ್ನಿಕುಲ್‌ ವಾಹಕ (ಎಎಲ್‌ಪಿ) ಮತ್ತು ಅಗ್ನಿಕುಲ್‌ ನಿರ್ವಹಣಾ ಕೇಂದ್ರ (ಎಎಂಸಿಸಿ) ಅನ್ನು ಒಳಗೊಂಡಿದೆ.

ADVERTISEMENT

ಮೊದಲ ಖಾಸಗಿ ಉಡಾವಣಾ ವಾಹಕ ಸ್ಥಾಪನೆಯಾಗಿದೆ. ಭಾರತ ಬಾಹ್ಯಾಕಾಶಕ್ಕೆ ತೆರಳಲು ಇನ್ನೊಂದು ವೇದಿಕೆ ಸಜ್ಜಾಗಿದೆ ಎಂದು ಸೋಮನಾಥ್ ಅವರು ಪ್ರತಿಕ್ರಿಯಿಸಿದರು. ಅಗ್ನಿಕುಲ್ ಸಹ ಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಅವರು, ‘ಅಗ್ನಿಕುಲ್ ವಾಹಕಕ್ಕೆ ಹಕ್ಕುಸ್ವಾಮ್ಯವುಳ್ಳ ಎಂಜಿನ್ ಅಳವಡಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.