ADVERTISEMENT

59 ಆ್ಯಪ್‌ಗಳಿಗೆ ನಿಷೇಧ: ಚೀನಾ ಆಕ್ಷೇಪ

ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮ ಮತ್ತು ತತ್ವಕ್ಕೆ ವಿರುದ್ಧ

ಪಿಟಿಐ
Published 27 ಜನವರಿ 2021, 15:45 IST
Last Updated 27 ಜನವರಿ 2021, 15:45 IST

ನವದೆಹಲಿ: ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತದ ಕ್ರಮಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

‘ವಿಶ್ವ ವಾಣಿಜ್ಯ ಸಂಸ್ಥೆಯ ಮಾರುಕಟ್ಟೆ ಆರ್ಥಿಕತೆಯ ನಿಯಮಾವಳಿಗಳು ಮತ್ತು ತತ್ವಗಳನ್ನು ಉಲ್ಲಂಘಿಸಿ ಭಾರತ ಈ ಕ್ರಮಕೈಗೊಂಡಿದೆ’ ಎಂದು ಚೀನಾ ರಾಯಭಾರಿ ಕಚೇರಿಯ ವಕ್ತಾರ ಜಿ. ರೋಂಗ್‌ ತಿಳಿಸಿದ್ದಾರೆ.

’ಚೀನಾ ಕಂಪನಿಗಳ ಹಿತಾಸಕ್ತಿ ಮತ್ತು ಮುಕ್ತ ಸ್ಪರ್ಧೆಯ ತತ್ವಗಳಿಗೆ ವಿರುದ್ಧವಾಗಿ ಭಾರತ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವನ್ನು ಚೀನಾ ವಿರೋಧಿಸುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ವಿದೇಶಗಳಲ್ಲಿ ವಹಿವಾಟು ನಡೆಸುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳನ್ನು ಪಾಲಿಸುವಂತೆ ನಮ್ಮ ಎಲ್ಲ ಕಂಪನಿಗಳಿಗೆ ಚೀನಾ ಸರ್ಕಾರ ಸದಾ ಸೂಚಿಸುತ್ತಾ ಬಂದಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.