ADVERTISEMENT

ಭಾರತದ ಜನಸಂಖ್ಯೆ ಅಂದಾಜು 139 ಕೋಟಿ: ಕೇಂದ್ರ ಸರ್ಕಾರ ಹೇಳಿಕೆ

ಪಿಟಿಐ
Published 25 ಜುಲೈ 2023, 9:40 IST
Last Updated 25 ಜುಲೈ 2023, 9:40 IST
ಜನಸಂಖ್ಯೆ (ಪ್ರಾತಿನಿಧಿಕ ಚಿತ್ರ)
ಜನಸಂಖ್ಯೆ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿರುವ ಭಾರತದ ಜನಸಂಖ್ಯೆ ಈ ವರ್ಷದ ಜುಲೈ 1ಕ್ಕೆ ಅನ್ವಯಿಸಿದಂತೆ ಅಂದಾಜು 139 ಕೋಟಿಯಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು, ಲೋಕಸಭೆಯಲ್ಲಿ ಜನಸಂಖ್ಯೆ ವಿವರದ ಬಗ್ಗೆ ಕೇಳಿದ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. 

'ರಾಷ್ಟ್ರೀಯ ಜನಸಂಖ್ಯಾ ಆಯೋಗದ ತಾಂತ್ರಿಕ ವಿಭಾಗ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ವರದಿ ಅನ್ವಯ ಭಾರತದ ಜನಸಂಖ್ಯೆ ಅಂದಾಜು 139,23,29,000 (2023ರ ಜುಲೈ 1ಕ್ಕೆ) ಇದೆ. ಚೀನಾದ ಜನಸಂಖ್ಯೆ ಅಂದಾಜು 142.56 ಕೋಟಿ (142,56,71,000) ಇದೆ' ಎಂದು ಉತ್ತರಿಸಿದ್ದಾರೆ.‘

ADVERTISEMENT

'ಇದಕ್ಕೆ ವಿಶ್ವಸಂಸ್ಥೆ, ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ, ಜನಸಂಖ್ಯಾ ವಿಭಾಗದ ಆನ್‌ಲೈನ್‌ ಪ್ರಕಟಣೆ, ವಿಶ್ವ ಜನಸಂಖ್ಯೆ ಕುರಿತ ವಿವರಣಾ ಪತ್ರ 2022ರ ವರದಿಯನ್ನು ಪರಿಗಣಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

2021ರಂದು ಜನಗಣತಿ ನಡೆಸುವ ಬಗ್ಗೆ ಮಾರ್ಚ್‌ 28, 2019ರಂದು ಗೆಜೆಟ್‌ನಲ್ಲಿ ತಿಳಿಸಲಾಗಿತ್ತು. ಕೋವಿಡ್‌ ಕಾರಣದಿಂದ 2021ರ ಜನಗಣತಿಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.