ADVERTISEMENT

ವಿವಾದಿತ ಭೂಮಿಯಲ್ಲಿ ನೇಪಾಳ ಫಲಕ: ತೆರವುಗೊಳಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 2:46 IST
Last Updated 9 ಜುಲೈ 2020, 2:46 IST
ನೇಪಾಳ ಸರ್ಕಾರವು ಬಿಹಾರದ ರಾಕ್ಸಲ್ ಜಿಲ್ಲೆಯ ಬಳಿ ನೆಟ್ಟ ಫಲಕ (ಕೃಪೆ: ಡೆಕ್ಕನ್ ಹೆರಾಲ್ಡ್)
ನೇಪಾಳ ಸರ್ಕಾರವು ಬಿಹಾರದ ರಾಕ್ಸಲ್ ಜಿಲ್ಲೆಯ ಬಳಿ ನೆಟ್ಟ ಫಲಕ (ಕೃಪೆ: ಡೆಕ್ಕನ್ ಹೆರಾಲ್ಡ್)   

ಪಟ್ನಾ: ನೇಪಾಳದಸಂಸತ್ತು ಹೊಸ ರಾಜಕೀಯ ನಕ್ಷೆಗೆ ಅನುಮೋದನೆ ನೀಡಿದ ಬೆನ್ನಲ್ಲೇ, ವಿವಾದಿತ ಭೂಮಿಯಲ್ಲಿ ತನ್ನ ಫಲಕವನ್ನು ಹಾಕಿದೆ. ನೇಪಾಳ ಸರ್ಕಾರವು ಬಿಹಾರದ ರಾಕ್ಸಲ್ ಜಿಲ್ಲೆಯ ಬಳಿ ಮಂಗಳವಾರ ಈ ಫಲಕ ನೆಟ್ಟಿದೆ.

‘ಬಿರ್ಗಂಜ್‌ನ ಪಾರ್ಸಾ ಜಿಲ್ಲಾ ಪೊಲೀಸ್ ಕಚೇರಿ, ಗಡಿ ಇಲ್ಲಿಂದ ಪ್ರಾರಂಭ’ ಎಂಬ ಫಲಕವನ್ನು ಹಾಕಿದೆ. ಆದರೆ, ಬಿಹಾರದ ಬಳಿ ಈ ಫಲಕವನ್ನು ಹಾಕಿದೆ.

ಈ ವಿಷಯವನ್ನು ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ) ಗಮನಕ್ಕೆ ತರಲಾಗಿದ್ದು,‌ ಉಪ ಕಮಾಂಡೆಂಟ್ ಮನೋಜ್ ಕುಮಾರ್, ವಿವಾದಿತ ಸ್ಥಳಕ್ಕೆ ತೆರಳಿ, ಫಲಕವನ್ನು ತೆರವುಗೊಳಿಸಿದ್ದಾರೆ.ವಿವಾದಿತ ಪ್ರದೇಶ ತನಗೆ ಸೇರಿದ್ದು ಎಂಬ ವಿಫಲ ಯತ್ನವನ್ನು ನೇಪಾಳ ಮಾಡಿದೆ ಎಂದುಹೇಳಿದ್ದಾರೆ.

ADVERTISEMENT

ನೇಪಾಳ ಗಡಿಯಲ್ಲಿರುವ ಭಾರತದ ವಲಸೆ ಅಧಿಕಾರಿಗಳ ಕಚೇರಿ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ.‌

ಭಾರತದ ಉತ್ತರಾಖಂಡದ ಕಾಲಾಪಾನಿ, ಲಿಪುಲೇಖ್, ಲಿಂಪಿಯಾರ್ಧುರ ಪ್ರದೇಶಗಳು ತನಗೆ ಸೇರಿದ್ದು ಎಂದು ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.