ADVERTISEMENT

ಪೂರ್ವಾನುಮತಿ ಇಲ್ಲದೇ ಕೈಗಾರಿಕೆ ನಡೆಸುವಂತಿಲ್ಲ: ಹಸಿರು ನ್ಯಾಯಪೀಠ

ಪಿಟಿಐ
Published 7 ಜೂನ್ 2021, 10:44 IST
Last Updated 7 ಜೂನ್ 2021, 10:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪರಿಸರ ಪೂರ್ವಾನುಮತಿ (ಎನ್ವಿರಾನ್ಮೆಂಟ್ ಕ್ಲಿಯರ್‌–ಇಸಿ) ಇಲ್ಲದೇ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ), ‘ಇಂಥ ವಿಚಾರಗಳಲ್ಲಿ ವಿನಾಯಿತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ‘ ಎಂದು ಸ್ಪಷ್ಟಪಡಿಸಿದೆ.

ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ, ‘ಪರಿಸರ ಪೂರ್ವಾನುಮತಿ ಇಲ್ಲದೇ, ಪರಿಹಾರ ಪಾವತಿಯ ಆಧಾರದ ಮೇಲೆ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವಂತಿಲ್ಲ‘ ಎಂದು ಹೇಳಿದೆ.

‘ಪರಿಸರ ಪೂರ್ವಾನುಮತಿ ಶಾಸನಬದ್ಧ ಆದೇಶವಾಗಿದ್ದು, ಅದನ್ನು ಪಾಲಿಸಬೇಕೆಂದು ನಾವು ಅಭಿಪ್ರಾಯಪಟ್ಟಿದ್ದೇವೆ‘ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.