ADVERTISEMENT

ಇನ್ಫೊಸಿಸ್‌ ನಿರ್ಮಾಣದ ವಿಶ್ರಾಮ ಸದನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:55 IST
Last Updated 21 ಅಕ್ಟೋಬರ್ 2021, 19:55 IST
ಇನ್ಫೊಸಿಸ್‌ ನಿರ್ಮಾಣದ ವಿಶ್ರಾಮ ಸದನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಉದ್ಘಾಟಿಸಿದರು
ಇನ್ಫೊಸಿಸ್‌ ನಿರ್ಮಾಣದ ವಿಶ್ರಾಮ ಸದನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಉದ್ಘಾಟಿಸಿದರು   

ನವದೆಹಲಿ (ಪಿಟಿಐ):ಇಲ್ಲಿನ ಏಮ್ಸ್ ಆವರಣದಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಗಾಗಿ (ಎನ್‌ಸಿಐ) ಇನ್ಫೊಸಿಸ್ ಫೌಂಡೇಶನ್ ನಿರ್ಮಿಸಿರುವ ‘ವಿಶ್ರಾಮ ಸದನ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದರು.806 ಹಾಸಿಗೆ ಸಾಮರ್ಥ್ಯದ ವಿಶ್ರಾಮ ಸದನವನ್ನು ಇನ್ಫೊಸಿಸ್ ಪ್ರತಿಷ್ಠಾನವು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯ ಭಾಗವಾಗಿ ನಿರ್ಮಿಸಿದೆ.

ಕ್ಯಾನ್ಸರ್ ರೋಗಿಗಳು ಹಾಗೂ ಅವ ಸಹಾಯಕರಿಗೆ ಇರುವುದಕ್ಕಾಗಿ ಈ ಸದನವನ್ನು ನಿರ್ಮಿಸಲಾಗಿದೆ. ಇದು ಹವಾನಿಯಂತ್ರಿತ ಸೌಕರ್ಯ ಹೊಂದಿರುವ ಸದನ. ರೋಗಿಗಳನ್ನು ನೋಡಿಕೊಳ್ಳಲು ದೀರ್ಘಕಾಲದವರೆಗೆ ಆಸ್ಪತ್ರೆಗಳಲ್ಲಿ ಉಳಿಯಬೇಕಾಗುವ ಸಹಾಯಕರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಸುಮಾರು ₹93 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸದನವು ಆಸ್ಪತ್ರೆ ಮತ್ತು ಎನ್‌ಸಿಐ ಒಪಿಡಿ ಬ್ಲಾಕ್‌ಗಳಿಗೆ ಸಮೀಪದಲ್ಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಮತ್ತು ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟನೆಯಲ್ಲಿ ಭಾ
ಗಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.