ADVERTISEMENT

ಜೈಪುರ | ಸಾರಿಸ್ಕಾ ಅಭಯಾರಣ್ಯದಲ್ಲಿ ಗಾಯಗೊಂಡಿದ್ದ ಹುಲಿ ಸಾವು

ಏಜೆನ್ಸೀಸ್
Published 9 ಜೂನ್ 2019, 6:34 IST
Last Updated 9 ಜೂನ್ 2019, 6:34 IST
ಮೃತಪಟ್ಟ ಹುಲಿಯ ದೇಹವನ್ನು ಸಿಬ್ಬಂದಿ ಸಾಗಿಸಿದರು. ಚಿತ್ರ: ಎಎನ್‌ಐ ಟ್ವೀಟ್‌
ಮೃತಪಟ್ಟ ಹುಲಿಯ ದೇಹವನ್ನು ಸಿಬ್ಬಂದಿ ಸಾಗಿಸಿದರು. ಚಿತ್ರ: ಎಎನ್‌ಐ ಟ್ವೀಟ್‌   

ಜೈಪುರ:ರಾಜಸ್ಥಾನದ ಅಲ್ವಾರ್‌ ಜಿಲ್ಲೆಯ ಸಾರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಗಾಯಗೊಂಡಿದ್ದ ಹುಲಿ ಶನಿವಾರ ಮೃತಪಟ್ಟಿದೆ. ಆದರೆ, ಹುಲಿಯ ಸಾವಿಗೆ ನಿರ್ದಿಷ್ಟಕಾರಣ ತಿಳಿದುಬಂದಿಲ್ಲ.

ಕಾಲಿಗೆ ಗಾಯಗೊಂಡಿದ್ದ ಹುಲಿಯನ್ನು ಶಸ್ತ್ರ ಚಿಕಿತ್ಸೆಗೆಒಳಪಡಿಸಲಾಗಿತ್ತು. ಗಾಯದಿಂದ ಚೇತರಿಸಿಕೊಂಡಹುಲಿಯು ಸುಮಾರು ಎರಡೂವರೆ ಕಿಲೋಮೀಟರ್‌ ದೂರ ಕ್ರಮಿಸಿಕುಸಿದು ಬಿದ್ದು ಮೃತಪಟ್ಟಿದೆ.

ಗಂಡು ಹುಲಿ ಸುಮಾರು7ರಿಂದ8 ವರ್ಷ ವಯಸ್ಸಿನದು. ಈ ಹುಲಿಯನ್ನು ರಣತಂಬೂರ್ ರಾಷ್ಟ್ರೀಯ ಉದ್ಯಾನದಿಂದ ಏಪ್ರಿಲ್‌ನಲ್ಲಿ ಸ್ಥಳಾಂತರಿಸಲಾಗಿತ್ತು ಎಂದು ಅಭಯಾರಣ್ಯದ ಉನ್ನತ ಅಧಿಕಾರಿಗಳುಸ್ಪಷ್ಟಪಡಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಧಿಕಾರಿಗಳಉಪಸ್ಥಿತಿಯಲ್ಲಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.