ADVERTISEMENT

ಅಂತರರಾಷ್ಟ್ರೀಯ ಮಾತೃಭಾಷಾ ದಿನ: ಭಾಷೆ ಸಮೃದ್ಧಗೊಳಿಸಲು ಸಂಕಲ್ಪ ಮಾಡಿ –ಅಮಿತ್ ಶಾ

ಪಿಟಿಐ
Published 21 ಫೆಬ್ರುವರಿ 2023, 14:21 IST
Last Updated 21 ಫೆಬ್ರುವರಿ 2023, 14:21 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ (ಪಿಟಿಐ): ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿದರೆ, ದೇಶದ ಎಲ್ಲ ಭಾಷೆಗಳೂ ಸಮೃದ್ಧವಾಗುತ್ತವೆ. ಆ ಮೂಲಕ ದೇಶವೂ ಸಮೃದ್ಧವಾಗುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ ಮಂಗಳವಾರ ತಿಳಿಸಿದರು.

ಅಂತರರಾಷ್ಟ್ರೀಯ ಮಾತೃ ಭಾಷಾ ದಿನದ ಪ್ರಯುಕ್ತ ಜನರಿಗೆ ಶುಭ ಕೋರಿದ ಅವರು, ಮಾತೃಭಾಷೆಯ ಜತೆಗೆ ಸಂಪರ್ಕ ಸಾಧಿಸಲು ಹಾಗೂ ಅದನ್ನು ಇನ್ನಷ್ಟು ಸಮೃದ್ಧಗೊಳಿಸಲು ಈ ಸಂದರ್ಭದಲ್ಲಿ ಸಂಕಲ್ಪ ಮಾಡಬೇಕಿದೆ ಎಂದರು.

‘ಮಾತೃ ಭಾಷೆಯನ್ನು ಗರಿಷ್ಠವಾಗಿ ಬಳಸಲು ನಾವು ಪ್ರತಿಜ್ಞೆ ಮಾಡಬೇಕಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಮಗುವು ತನ್ನ ಮಾತೃ ಭಾಷೆಯಲ್ಲಿ ಓದಿದಾಗ, ಮಾತನಾಡಿದಾಗ ಮತ್ತು ಯೋಚಿಸಿದಾಗ ಮಗುವಿನ ಚಿಂತಿಸುವ, ತರ್ಕಿಸುವ, ವಿಶ್ಲೇಷಿಸುವ ಮತ್ತು ಸಂಶೋಧಿಸುವ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಅವರು ವಿವರಿಸಿದರು.

ಇದನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯ ಮೂಲಕ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡಿದೆ. ಇದು ಭಾರತದ ಉಜ್ವಲ ಭವಿಷ್ಯಕ್ಕೆ ಆಧಾರವಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.