ADVERTISEMENT

ವಿಶ್ವ ಮಹಿಳಾ ದಿನ: ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆಯುತ್ತಿರುವ ಮಹಿಳೆಯರು

ಏಜೆನ್ಸೀಸ್
Published 8 ಮಾರ್ಚ್ 2019, 7:05 IST
Last Updated 8 ಮಾರ್ಚ್ 2019, 7:05 IST
   

ನವದೆಹಲಿ:ಇಂದು ವಿಶ್ವ ಮಹಿಳಾ ದಿನ(ಮಾರ್ಚ್‌ 8). ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿರುವ ಮಹಿಳೆಯರನೇಕರು. ಈ ಸಂದರ್ಭದಲ್ಲಿ ಅತಹವರಲ್ಲಿ ಕೆಲವರು ವಿಭಿನ್ನ ಹಾಗೂ ವಿಶೇಷ ಕಾರಣಗಳಿಗಾಗಿ ಗುರುತಿಸಿಕೊಳ್ಳುತ್ತಾರೆ. ವಿಶೇಷವಾಗಿ ಗುರುತಿಸಿಕೊಂಡ ಕೆಲ ಮಹಿಳೆಯರ ಕುರಿತ ಒಂದು ನೋಟ ಇಲ್ಲಿದೆ.

ಗ್ರಾಮದ ಮಕ್ಕಳು ಐಎಎಸ್ ಅಧಿಕಾರಿಗಳಾಗಲೆಂಬ ಕನಸು ಹೊತ್ತ ಮಹಿಳಾ ಸರ್ಪಂಚ್

ಮಧ್ಯ‍ಪ್ರದೇಶದ ಖತರ್ಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ 10 ವರ್ಷಗಳಿಂದ ಸರ್ಪಂಚ್‌ ಆಗಿರುವ ಮಹಿಳೆ ಪ್ರಿಯಾಂಕಾ ಪಾಂಡೆ ಅವರು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ.

ADVERTISEMENT

ಮಹಿಳಾ ದಿನಾಚರಣೆ ವೇಳೆ ಮಾತನಾಡಿರುವ ಅವರು, ಗ್ರಾಮೀಣ ಮಕ್ಕಳು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಲು ಅವರಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುತ್ತಿದ್ದೇನೆ. ಗ್ರಾಮದಲ್ಲಿ ಸಂಪೂರ್ಣ ವೈಫೈ ಸಂಪರ್ಕವಿದೆ. ದುಡಿಯುವ ಮಹಿಳೆಯರ ಕೈಗಳಿಗೆ ಉದ್ಯೋಗ ನೀಡಲಾಗಿದೆ’ ಎಂದು ಹೇಳಿದ್ದಾರೆ.

ಈ ರೈಲಿನ ಎಲ್ಲಾ ಸಿಬ್ಬಂದಿ ಮಹಿಳೆಯರು

ಆ ರೈಲಿನ ಲೋಕೋಪೈಲಟ್‌, ಟಿಕೆಟ್‌ ಪರಿಶೀಲಕರು, ಜಿಆರ್‌ಪಿ ಕಾನ್‌ಸ್ಟೇಬಲ್‌ ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಮಹಿಳೆಯರೇ ಇದ್ದಾರೆ.

ಇದು, ಮಧ್ಯಪ್ರದೇಶದಲ್ಲಿ ಭೋಪಾಲ್‌–ಬಿಲಾಸ್ಪುರ ಎಕ್ಸ್‌ಪ್ರಸ್‌ ರೈಲಿನ ಚಿತ್ರಣ. ಈ ರೈಲು ಮಹಿಳಾ ದಿನದ ಸಂದರ್ಭದಲ್ಲಿ ಬೆಳಿಗ್ಗೆ ಇಂದಿನ ಪ್ರಯಾಣ ಆರಂಭಿಸಿದಾಗ ಮಹಿಳಾ ಸಿಬ್ಬಂದಿಯೊಬ್ಬರು ಹಸಿರು ಭಾವುಟ ತೋರಿಸಿದ್ದಾರೆ.

ಮಹಿಳಾ ಜಾಗೃತಿಯಲ್ಲಿ ತೊಡಗಿರುವ ಮಹಿಳಾ ಪೊಲೀಸ್‌

ಮಹಿಳಾ ದಿನದ ಅಂಗವಾಗಿ ನವದೆಹಲಿಯಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿ ಗಸ್ತು ತಿರುಗುತ್ತಾ ಮಹಿಳೆಯರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

‘ಮಹಿಳೆಯರು ಕಷ್ಟದ ಸಂದರ್ಭಗಳಲ್ಲಿದ್ದಾಗ ನೆರವಾಗುವುದು ನನ್ನ ಜವಾಬ್ದಾರಿ. ನಿಮ್ಮಲ್ಲಿ ವಿಶ್ವಾಸ ಇದ್ದರೆ ನೀವು ಯಾವುದೇ ಸಂದರ್ಭದಲ್ಲೂ ಯಾವುದೇ ಪರಿಸ್ಥಿತಿಯನ್ನು ಸ್ವತಹ ನಿಭಾಯಿಸಬಹುದು. ಆದ್ದರಿಂದ ಆತ್ಮ ವಿಶ್ವಾಸ ಗಳಿಸಿ’ ಎಂದು ಸಬ್‌ಇನ್‌ಸ್ಪೆಕ್ಟರ್‌ ಸರಿಸ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.