ADVERTISEMENT

ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಅಡಚಣೆ: ಟ್ವೀಟರ್‌ನಲ್ಲಿ ಬಳಕೆದಾರರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 6:38 IST
Last Updated 29 ನವೆಂಬರ್ 2019, 6:38 IST
   

ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಫೇಸ್‌ಬುಕ್‌ ಮತ್ತು ಅದರ ಒಡೆತನದ ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್‌ಗಳಲ್ಲಿ ಅಡಚಣೆ ಉಂಟಾಗಿತ್ತು.ಈ ಮೂರು ಸಾಮಾಜಿಕ ಜಾಲತಾಣಗಳು ಗುರುವಾರ ಸಂಜೆ ಕೆಲ ನಿಮಿಷಗಳ ಕಾಲ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ್ದವು.

ಫೇಸ್‌ಬುಕ್‌ ಲಾಗ್‌ ಇನ್‌ ಪೇಜ್‌ನಲ್ಲಿ, ‘ಕ್ಷಮಿಸಿ, ಏನೋ ತಪ್ಪಾಗಿದೆ. ನಾವು ಸಾಧ್ಯವಾದಷ್ಟು ಬೇಗ ಇದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. (Sorry, something went wrong. We're working on getting this fixed as soon as we can) ಎಂಬ ವಾಕ್ಯಗಳು ಕಾಣುತ್ತಿದ್ದವು.

ಇನ್‌ಸ್ಟಾಗ್ರಾಂ ಲಾಗ್‌ ಇನ್‌ ಪೇಜ್‌ನಲ್ಲಿ, ‘ಉಫ್... ದೋಷ ಸಂಭವಿಸಿದೆ (Oops, an error occurred.) ಎಂಬ ಸಂದೇಶ ತೋರುತ್ತಿತ್ತು.

ADVERTISEMENT

ಮುಖ್ಯ ಸರ್ವರ್‌ ಕಾನ್‌ಫಿಗರೇಷನ್‌ನಲ್ಲಿ ಬದಲಾವಣೆ ಮಾಡಲಾಗಿದ್ದರ ಪರಿಣಾಮ ಫೇಸ್‌ಬುಕ್‌ ಸೇರಿದಂತೆ ಅದರ ಒಡೆತನದ ಸಾಮಾಜಿಕ ಜಾಲತಾಣಗಳು ಕಾರ್ಯ ಸ್ಥಗಿತಗೊಳಿಸಿದ್ದವು ಎನ್ನಲಾಗಿದೆ. ಮೊದಲು ಅಮೆರಿಕಾ ಮತ್ತು ಯುರೋಪ್‌ನಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ. ಆ ನಂತರ ಗುರುವಾರ ಸಂಜೆ ಭಾರತದಲ್ಲೂ ಈ ಸಮಸ್ಯೆ ತಲೆದೋರಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಾಕಲಾಗಿರುವ ಯಾವುದೇ ಪೋಸ್ಟ್‌, ಕಾಮೆಂಟ್ಸ್‌ ಮತ್ತು ಪೋಟೋಗಳು ಕಾಣಿಸುತ್ತಿರಲಿಲ್ಲ. ಅದರ ಬದಲಾಗಿ ಖಾಲಿ ಪೇಜ್‌ ಕಾಣುತ್ತಿತ್ತು ಎಂದು ಅಮೆರಿಕಾದ ಬಳಕೆದಾರರೊಬ್ಬರು ತಮ್ಮ ಟ್ವೀಟರ್‌ ಖಾತೆಯಲ್ಲಿ ದೂರಿದ್ದಾರೆ.

ಈ ಸಾಮಾಜಿಕ ಜಾಲತಾಣಗಳಲ್ಲಿ ಅಡಚಣೆ ಕಾಣಿಸಿಕೊಂಡ ನಂತರ ಟ್ವೀಟರ್‌ಗೆ ಧಾವಿಸಿದ ಬಳಕೆದಾರರು ತಮ್ಮ ಅಸಹನೆ ಹೊರಹಾಕಿದ್ದಾರೆ. ಕೆಲವೇ ನಿಮಿಷಗಳಲ್ಲಿ #FacebookDown and #InstragramDown ಹ್ಯಾಶ್‌ಟ್ಯಾಗ್‌ಗಳು ಟ್ವೀಟರ್‌ನಲ್ಲಿ ಟ್ರೆಂಡ್‌ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.