ಜಮ್ಮು: ಇಲ್ಲಿನ ಆರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಒಳನುಸುಳುತ್ತಿದ್ದ ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಗುಂಡಿಟ್ಟು ಕೊಂದಿದೆ.
‘ಬಿಎಸ್ಎಫ್‌ನ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಅರ್ನಿಯಾ ಸೆಕ್ಟರ್‌ನಲ್ಲಿ ಭಾರತೀಯ ಭೂಪ್ರದೇಶದೊಳಗೆ ಪ್ರವೇಶಿಸಿದ ನುಸುಳುಕೋರನನ್ನು ಹೊಡೆದುರುಳಿಸಲಾಯಿತು’ ಎಂದು ಬಿಎಸ್ಎಫ್ ಜಮ್ಮು ಪ್ರಾಂತ್ಯದ ಡಿಐಜಿ ಎಸ್‌ಪಿಎಸ್ ಸಂದು ತಿಳಿಸಿದ್ದಾರೆ.
’ಇದಾದ ನಂತರ ಕೆಲಹೊತ್ತಿನ ನಂತರ ಸಾಂಬಾ ಜಿಲ್ಲೆಯ ರಾಮಗಡ ಸೆಕ್ಟರ್‌ನಲ್ಲಿ ಅಪಾರ ಪ್ರಮಾಣದ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು,ಬಿಎಸ್‌ಎಫ್ ದಾಳಿ ನಡೆಸಿ ವಶಪಡಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.