ADVERTISEMENT

ವಿದೇಶ ಪ್ರಯಾಣ: ಕಾರ್ತಿ ಚಿದಂಬರಂಗೆ ಅನುಮತಿ

ಪಿಟಿಐ
Published 22 ಡಿಸೆಂಬರ್ 2024, 14:31 IST
Last Updated 22 ಡಿಸೆಂಬರ್ 2024, 14:31 IST
ಕಾರ್ತಿ ಚಿದಂಬರಂ 
ಕಾರ್ತಿ ಚಿದಂಬರಂ    

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಜನವರಿ 4ರಿಂದ12ರ ನಡುವೆ ಆಸ್ಟ್ರಿಯಾ ಮತ್ತು ಬ್ರಿಟನ್‌ಗೆ ಪ್ರಯಾಣಿಸಲು ದೆಹಲಿಯ ನ್ಯಾಯಾಲಯ ಅನುಮತಿ ನೀಡಿದೆ.

ತಮ್ಮ ಕಂಪನಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಮಗಳನ್ನು ಭೇಟಿ ಮಾಡುವ ಉದ್ದೇಶಕ್ಕಾಗಿ ಕಾರ್ತಿ ಚಿದಂಬರಂ ಅವರಿಗೆ ವಿಯೆನ್ನಾ (ಆಸ್ಟ್ರಿಯಾ) ಮತ್ತು ಬ್ರಿಟನ್‌ಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT