ADVERTISEMENT

ಲಂಚ ಪಡೆದ ಆರೋಪ: ಐಪಿಎಸ್‌ ಅಧಿಕಾರಿ ಬಂಧನ

ಪಿಟಿಐ
Published 2 ಫೆಬ್ರುವರಿ 2021, 14:12 IST
Last Updated 2 ಫೆಬ್ರುವರಿ 2021, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಲಂಚ ‍ಪಡೆದ ಆರೋಪದ ಹಿನ್ನೆಲೆಯಲ್ಲಿ ಐಪಿಎಸ್‌ ಅಧಿಕಾರಿಮನೀಷ್‌ ಅಗರ್‌ವಾಲ್‌ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಮಂಗಳವಾರ ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳ ಪರವಾಗಿ ಕಟ್ಟಡ ನಿರ್ಮಾಣ ಕಂಪನಿಯೊಂದರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇರೆಗೆ ಜನವರಿ 13ರಂದು ಪೆಟ್ರೋಲ್‌ ಪಂಪ್‌ ಮಾಲೀಕ ನೀರಜ್‌ ಮೀನ ಎಂಬವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಮನೀಷ್‌ ಅಗರ್‌ವಾಲ್‌ ಅವರ ಹೆಸರೂ ಕೇಳಿಬಂದಿತ್ತು.

2010ರ ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿರುವ ಮನೀಷ್‌ ಪ್ರಸ್ತುತ ರಾಜ್ಯ ವಿಪತ್ತು ನಿರ್ಮಹಣಾ ಪಡೆಯ ಕಮಾಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕಿಂತ ಮೊದಲು ಅವರು ದೌಸಾದಲ್ಲಿ ಎಸ್‌ಪಿ ಆಗಿದ್ದರು.

ADVERTISEMENT

ಪೆಟ್ರೋಲ್‌ ಪಂಪ್‌ ಮಾಲೀಕ ನೀರಜ್‌ ಮೀನ ಜೊತೆಗೆ ರಾಜಸ್ಥಾನ ಆಡಳಿತ ಸೇವೆಯ ಇಬ್ಬರು ಅಧಿಕಾರಿಗಳನ್ನು ಕೂಡ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.