ADVERTISEMENT

ಇಡಿ ವಿಚಾರಣೆಗೆ ಹಾಜರಾದ ಇಕ್ಬಾಲ್‌

ಅಕ್ಟೋಬರ್‌ 7ಕ್ಕೆ ಮತ್ತೆ ಬುಲಾವ್...

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 18:24 IST
Last Updated 2 ಅಕ್ಟೋಬರ್ 2020, 18:24 IST
   

ನವದೆಹಲಿ: ರಾಮನಗರದ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಪ್ತ ಇಕ್ಬಾಲ್‌ ಹುಸೇನ್‌ ಅವರು ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದರು.

ಇಲ್ಲಿನ ಖಾನ್‌ ಮಾರ್ಕೆಟ್‌ ಬಳಿ ಇರುವ ಇ.ಡಿ. ಪ್ರಧಾನ ಕಚೇರಿಗೆ ಬೆಳಿಗ್ಗೆ ಪ್ರಮುಖ ದಾಖಲೆಗಳೊಂದಿಗೆ ಬಂದ ಇಕ್ಬಾಲ್‌ ಅವರನ್ನು ರಾತ್ರಿ 9ರವರೆಗೂ ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಹಣಕಾಸಿನ ವ್ಯವಹಾರಗಳ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದರು.

ಮತ್ತೆ ಅಕ್ಟೋಬರ್‌ 7ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದಕ್ಕೂ ಮೊದಲು ಇಕ್ಬಾಲ್‌ ಅವರು ಸೆಪ್ಟೆಂಬರ್ 17ರಂದು ಇ.ಡಿ. ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.