ADVERTISEMENT

ಮಾನನಷ್ಟ ಮೊಕದ್ದಮೆ: ಮೇನಕಾಗೆ ಇಸ್ಕಾನ್ ನೋಟಿಸ್‌

ಪಿಟಿಐ
Published 30 ಸೆಪ್ಟೆಂಬರ್ 2023, 3:23 IST
Last Updated 30 ಸೆಪ್ಟೆಂಬರ್ 2023, 3:23 IST
ಮೇನಕಾ ಗಾಂಧಿ
ಮೇನಕಾ ಗಾಂಧಿ   

ಕೋಲ್ಕತ್ತ (ಪಿಟಿಐ): ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ(ಇಸ್ಕಾನ್) ಯು ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಮೇಲೆ ₹100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ನೋಟಿಸ್‌ ಕಳುಹಿಸಿದೆ.

ಇಸ್ಕಾನ್‌ನ ಗೋಶಾಲೆಗಳಲ್ಲಿ ಹಸುಗಳ ಪೋಷಣೆ, ನಿರ್ವಹಣೆ ಕ್ರಮ ಕುರಿತು ಮೇನಕಾ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಇಸ್ಕಾನ್‌ ವಿರುದ್ಧದ ಆರೋಪಕ್ಕಾಗಿ ಮೇನಕಾ ಗಾಂಧಿ ಅವರಿಗೆ ನೋಟಿಸ್‌ ಕಳುಹಿಸಲಾಗಿದೆ. ಸಂಸದೆಯ ಆರೋಪ ದುರುದ್ದೇಶದಿಂದ ಕೂಡಿದೆ. ಇದರಿಂದ ಇಸ್ಕಾನ್‌ನ ಭಕ್ತರು, ಬೆಂಬಲಿಗರು, ಹಿತೈಷಿಗಳಿಗೆ ನೋವಾಗಿದೆ ಎಂದು ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.