ದಕ್ಷಿಣ ಗಾಜಾದಲ್ಲಿ ನಿರಾಶ್ರಿತರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು
– ಎಎಫ್‌ಪಿ ಚಿತ್ರ
ದೀರ್ ಅಲ್–ಬಲಾಹ್ (ಗಾಜಾ ಪಟ್ಟಿ): ಮಾನವೀಯ ನೆರವು ಪಡೆಯಲು ಬಂದಿದ್ದ 26 ಪ್ಯಾಲೆಸ್ಟೀನಿಯರು ಗಾಜಾ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ.
ಮೋರಗ್ ಕಾರಿಡಾರ್‌ನಲ್ಲಿ 10 ಮಂದಿ ಮತ್ತು ಜಿಕಿಮ್ ಕ್ರಾಸಿಂಗ್‌ನಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮತ್ತು ಶಿಫಾ ಅಸ್ಪತ್ರೆ ತಿಳಿಸಿವೆ.
ಕೇಂದ್ರ ಗಾಜಾದಲ್ಲಿ ನೆರವಿಗಾಗಿ ಕಾಯುತ್ತಿದ್ದ ಗುಂಪಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್ ಗುಂಡಿನ ದಾಳಿಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ ಎಂದು ನುಸೇರತ್ ನಿರಾಶ್ರಿತರ ಶಿಬಿರದ ಬಳಿಯ ಅವಾಡ ಆಸ್ಪತ್ರೆ ಹೇಳಿದೆ.
‘ನೆರವು ನೀಡುತ್ತಿದ್ದ ಸ್ಥಳಗಳಲ್ಲಿ ಯಾವುದೇ ದುರ್ಘಟನೆಗಳು ನಡೆದಿಲ್ಲ’ ಎಂದು ಗಾಜಾ ಮಾನವೀಯ ನೆರವು ನೀಡುತ್ತಿರುವ ಸಂಸ್ಥೆ ಸ್ಪಷ್ಟಪಡಿಸಿದೆ.
‘ಮಧ್ಯ ಗಾಜಾದಲ್ಲಿ ನೆರವು ನೀಡುತ್ತಿದ್ದ ಸ್ಥಳಗಳಲ್ಲಿ ಯಾವುದೇ ದಾಳಿಯನ್ನು ನಡೆಸಿಲ್ಲ’ ಎಂದು ಇಸ್ರೇಲ್ ಸೇನೆ ಹೇಳಿದೆ.
ಅಪೌಷ್ಟಿಕತೆಯಿಂದ ಸಾವು: ಪ್ಯಾಲೆಸ್ಟೀನ್‌ನಲ್ಲಿ ಅಪೌಷ್ಟಿಕತೆಯಿಂದಾಗಿ ಶನಿವಾರ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಯುದ್ಧ ಆರಂಭಗೊಂಡ ಬಳಿಕ ಮೃತಪಟ್ಟ ಮಕ್ಕಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.