ADVERTISEMENT

‘ಚಂದ್ರಯಾನ 2’ ಹೊಸ ಮುಹೂರ್ತ: ಸೋಮವಾರ ಮಧ್ಯಾಹ್ನ 2.43

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2019, 7:23 IST
Last Updated 18 ಜುಲೈ 2019, 7:23 IST
   

ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆಯನ್ನು ಇಸ್ರೋ ಜುಲೈ 22ಕ್ಕೆ ಮರುನಿಗದಿಪಡಿಸಿದೆ. ಚಂದ್ರನ ಅಧ್ಯಯನಕ್ಕೆ ಭಾರತ ನಡೆಸುತ್ತಿರುವ ಈ ಮಹತ್ವದ ಉಡಾವಣೆಗೆಜುಲೈ 15ರ ನಸುಕಿನ 2.51ಕ್ಕೆಈ ಮೊದಲು ದಿನಾಂಕ ನಿಗದಿಯಾಗಿತ್ತು. ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಉಡಾವಣೆಯನ್ನು ಇಸ್ರೋ ಕೊನೆಯ ಗಳಿಗೆಯಲ್ಲಿ ಅನಿರ್ದಿಷ್ಟಾವಧಿಗೆಮುಂದೂಡಿತ್ತು.

ಇಂದು ಮುಂಜಾನೆ ಚಂದ್ರಯಾನ 2ಸಂಬಂಧ ಟ್ವೀಟ್ ಮಾಡಿರುವ ಇಸ್ರೋ ಜುಲೈ 22ರ ಸೋಮವಾರ ಮಧ್ಯಾಹ್ನ 2.43ಕ್ಕೆ ಉಡಾವಣೆಯ ಸಮಯ ನಿಗದಿಪಡಿಸಿದೆ.

ಚಂದ್ರಯಾನ 2 ಉಡಾವಣೆಯನ್ನು ಕೊನೆಯ ಗಳಿಗೆಯಲ್ಲಿ ಅನಿವಾರ್ಯವಾಗಿ ಮುಂದೂಡಿದಾಗ ಬೆಂಬಲಕ್ಕೆ ನಿಂತ ಎಲ್ಲ ಭಾರತೀಯರಿಗೂ ಇಸ್ರೋ ಟ್ವೀಟ್‌ನಲ್ಲಿ ಕೃತಜ್ಞತೆ ಸಲ್ಲಿಸಿದೆ.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.