ADVERTISEMENT

ಇಸ್‌ ಬಾರ್‌ ಮೋದಿ ಬೇರೋಜ್ಗಾರ್‌: ಘೋಷವಾಕ್ಯ ಹೊರಡಿಸಿದ ಸಿಪಿಎಂ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 18:12 IST
Last Updated 22 ಮಾರ್ಚ್ 2019, 18:12 IST
   

ನವದೆಹಲಿ:ಬಿಜೆಪಿಯ ‘ಮೈ ಭೀ ಚೌಕೀದಾರ್‌’ ಘೋಷಣೆಗೆ ಪರ್ಯಾಯವಾಗಿ, ಸಿಪಿಎಂ ‘ಇಸ್‌ ಬಾರ್‌ ಮೋದಿ ಬೇರೋಜ್ಗಾರ್‌’ (ಈ ಬಾರಿ ಮೋದಿ ನಿರುದ್ಯೋಗಿ) ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸಲಿದೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸುದೀರ್ಘ ಸಮಾಲೋಚನಾ ಸಭೆಯಲ್ಲಿ ಈ ಘೋಷಣೆಯೊಂದಿಗೆ ಚುನಾವಣೆ ಎದುರಿಸಲು ಪಕ್ಷ ತೀರ್ಮಾನಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌, ‘ಈ ಬಾರಿ ನಮ್ಮ ಪಕ್ಷ ಮೂರು ಅಂಶಗಳನ್ನಿಟ್ಟು ಹೋರಾಟ ನಡೆಸುವುದು. ಮೊದಲನೆಯದು ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು. ಎರಡನೆಯದು ಎಡಪಂಥೀಯ ಪಕ್ಷಗಳಿಗೇ ಮತ ನೀಡುವಂತೆ ಜನರ ಮನವೊಲಿಸುವುದು ಮತ್ತು ಮೂರನೆಯದಾಗಿ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರವನ್ನು ರಚಿಸುವುದು’ ಎಂದರು.

ADVERTISEMENT

ಪಕ್ಷ ಈ ಬಾರಿಯೂ ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬಲಿಷ್ಠ ಅಭ್ಯರ್ಥಿ ಇಲ್ಲದ ಕಡೆ ಮಿತ್ರಪಕ್ಷಗಳ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ ಎಂದು ವೃಂದಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.