ADVERTISEMENT

ಐಟಿ ರಿಟರ್ನ್ಸ್‌ : ಪ್ಯಾನ್‌ಗೆ ಆಧಾರ್‌ ಜೋಡಣೆ ಕಡ್ಡಾಯ

ಪಿಟಿಐ
Published 6 ಫೆಬ್ರುವರಿ 2019, 18:49 IST
Last Updated 6 ಫೆಬ್ರುವರಿ 2019, 18:49 IST
   

ನವದೆಹಲಿ:ಆದಾಯ ತೆರಿಗೆ ವಿವರ (ಐಟಿ ರಿಟರ್ನ್ಸ್‌) ಸಲ್ಲಿಸುವ ವೇಳೆ ಪ್ಯಾನ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದಾಯ ತೆರಿಗೆ ಕಾಯ್ದೆಯಲ್ಲಿನ 139ಎಎ ಸೆಕ್ಷನ್‌ ಅನ್ನು ಎತ್ತಿ ಹಿಡಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಎಸ್. ಅಬ್ದುಲ್‌ ನಜೀರ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠ ಈ ಆದೇಶ ನೀಡಿದೆ.

ಆಧಾರ್‌ ಮತ್ತು ಪ್ಯಾನ್‌ ಜೋಡಣೆ ಮಾಡದಿದ್ದರೂ ಐಟಿ ರಿಟರ್ನ್ಸ್‌ ಸಲ್ಲಿಸಲು ಶ್ರೇಯಾ ಸೇನ್‌ ಮತ್ತು ಜಯಶ್ರೀ ಸಾತ್ಪುತೆ ಎಂಬುವವರಿಗೆ ಅವಕಾಶ ನೀಡಿದ ದೆಹಲಿ ಹೈಕೋರ್ಟ್‌ ನೀಡಿದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ADVERTISEMENT

’ಈಗ ನೀಡಿದ ಆದೇಶದ ಅನುಸಾರವೇ 2019–20ನೇ ಸಾಲಿನ ಆದಾಯ ತೆರಿಗೆ ಲೆಕ್ಕಪತ್ರ ವಿವರವನ್ನು ಸಲ್ಲಿಸಬೇಕಾಗುತ್ತದೆ‘ ಎಂದು ಪೀಠ ಸೂಚಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ 26ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌, ಬ್ಯಾಂಕ್‌ ಖಾತೆಗಳು, ಮೊಬೈಲ್‌ ಸಂಖ್ಯೆ ಮತ್ತು ಶಾಲಾ ಪ್ರವೇಶಾತಿ ವೇಳೆ ಆಧಾರ್‌ ಜೋಡಣೆ‌ಯನ್ನು ಕಡ್ಡಾಯವಲ್ಲ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.