ADVERTISEMENT

ಪ್ರಧಾನಿಗೆ ಲಸಿಕೆ ಹಾಕಿದ್ದು, ಸ್ಮರಣೀಯ ಕ್ಷಣವಾಗಿದೆ: ಸಂತಸ ಹಂಚಿಕೊಂಡ ನರ್ಸ್‌ಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 5:19 IST
Last Updated 8 ಏಪ್ರಿಲ್ 2021, 5:19 IST
ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಟ್ವಿಟರ್‌ ಚಿತ್ರ: @narendramodi) 
ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಟ್ವಿಟರ್‌ ಚಿತ್ರ: @narendramodi)    

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಏಮ್ಸ್‌ನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಅರ್ಹರಾಗಿರುವವರೆಲ್ಲ ಕೂಡಲೇ ಲಸಿಕೆ ಹಾಕಿಸಿಕೊಳ್ಳಿ ಎಂದು ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಪುದುಚೇರಿ ಮೂಲದ ನರ್ಸ್ ಪಿ. ನಿವೇದಾ ಮತ್ತು ಪಂಜಾಬ್‌ ಮೂಲದ ನಿಶಾ ಶರ್ಮಾ ಮೋದಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಿದ್ದಾರೆ.


‘ನಾನು, ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋವಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿಯಾಗಿ ಲಸಿಕೆ ಹಾಕಿದ್ದು, ಒಂದು ಸ್ಮರಣೀಯ ಕ್ಷಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಲಸಿಕೆನೀಡಿದ ಇಬ್ಬರು ನರ್ಸ್‌ಗಳ ಪೈಕಿ ಒಬ್ಬರಾದ ನಿಶಾ ಶರ್ಮಾ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋವಾಕ್ಸಿನ್ ಮೊದಲ ಡೋಸ್ ನೀಡಿದ ವ್ಯಾಕ್ಸಿನೇಟರ್ ನಾನು. ಇಂದು ನಾನು ಅವರನ್ನು ಭೇಟಿಯಾಗಲು ಮತ್ತು ಅವರಿಗೆ ಎರಡನೇ ಬಾರಿಗೆ ಲಸಿಕೆ ಹಾಕಲು ಮತ್ತೊಂದು ಅವಕಾಶ ಸಿಕ್ಕಿತು. ಇದರಿಂದ ನನಗೆ ಮತ್ತಷ್ಟು ಸಂತಸವಾಗಿದೆ. ಪ್ರಧಾನಿ ಮೋದಿಯವರು ನಮ್ಮೊಂದಿಗೆ ಮಾತನಾಡಿದರು, ನಾವು ಅವರೊಂದಿಗೆ ಫೋಟೊಗಳನ್ನು ತೆಗೆಸಿಕೊಂಡಿದ್ದೇವೆ’ ಎಂದು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮತ್ತೊಬ್ಬ ನರ್ಸ್ ಪಿ ನಿವೇದಾ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.