ADVERTISEMENT

ಲಡಾಖ್: ಐಟಿಬಿಪಿ ಮುಖ್ಯಸ್ಥರಾಗಿ ಲಹರಿ ದೊರ್ಜಿ ಲಾಟೂ

ಪಿಟಿಐ
Published 30 ಜನವರಿ 2021, 11:37 IST
Last Updated 30 ಜನವರಿ 2021, 11:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚೀನಾಗೆ ಹೊಂದಿಕೊಂಡ, ಗಡಿ ರಕ್ಷಣೆಯಲ್ಲಿ ನಿಯೋಜಿತರಾಗಿರುವ ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಮುಖ್ಯಸ್ಥರಾಗಿ 1999ನೇ ತಂಡದ, ಮಣಿಪುರ ಕೇಡರ್ ಅಧಿಕಾರಿ ಲಹರಿ ದೊರ್ಜಿ ಲಾಟೂ ನೇಮಕಗೊಂಡಿದ್ದಾರೆ.

ಇದಕ್ಕೂ ಮೊದಲು ಈ ಸ್ಥಾನದಲ್ಲಿ ದೀಪಂ ಸೇತ್ ಇದ್ದರು. ಲಡಾಖ್‌ನಲ್ಲಿ ಚೀನಾಗೆ ಹೊಂದಿಕೊಂಡ ವಾಸ್ತವ ನಿಯಂತ್ರಣ ಗಡಿ ರೇಖೆಯುದ್ದಕ್ಕೂ ಭದ್ರತೆಗಾಗಿ ಐಟಿಬಿಪಿ ನಿಯೋಜಿಸಲಾಗಿದೆ.

ಸೇತ್ ಅವರು ಅವರು ಉತ್ತರಾಖಂಡ್‌ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದು ಅವರನ್ನು ದೆಹಲಿಯಲ್ಲಿರುವ ಐಟಿಬಿಪಿ ಮುಖ್ಯ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಲಾಟೂ ಈಚೆಗೆ ಐಟಿಬಿಪಿ ಸೇರ್ಪಡೆಗೊಂಡಿದ್ದರು. ಇದಕ್ಕೂ ಮೊದಲು ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ವಿಶೇಷ ರಕ್ಷಣಾ ದಳ (ಎಸ್‌ಪಿಜಿ)ಯಲ್ಲಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.