ADVERTISEMENT

60 ವರ್ಷಗಳಿಂದ ಚೀನಾ ಆಕ್ರಮಿತ ಪ್ರದೇಶದಲ್ಲಿ ಸೇತುವೆ ನಿರ್ಮಾಣ: ಭಾರತ

ಪ್ಯಾಂಗಾಂಗ್‌ ಸರೋವರ ಬಳಿ ಸೇತುವೆ

ಪಿಟಿಐ
Published 6 ಜನವರಿ 2022, 19:31 IST
Last Updated 6 ಜನವರಿ 2022, 19:31 IST
ಪಾಂಗ್ಯಾಂಗ್‌ ಸರೋವರ
ಪಾಂಗ್ಯಾಂಗ್‌ ಸರೋವರ   

ನವದೆಹಲಿ: ಪೂರ್ವ ಲಡಾಖ್ ಬಳಿ ಪಾಂಗ್ಯಾಂಗ್‌ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸಿರುವ ಸೇತುವೆ, ಕಳೆದ 60 ವರ್ಷಗಳಿಂದಲೂ ಚೀನಾ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿದೆ ಎಂದು ಭಾರತ ಗುರುವಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ‘ಚೀನಾದ ಇಂಥ ಕೃತ್ಯಗಳನ್ನು ಭಾರತ ಎಂದಿಗೂ ಒಪ್ಪಿಲ್ಲ’ ಎಂದರು.

ಅರುಣಾಚಲ ಪ್ರದೇಶದ ಕೆಲ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿದ ಚೀನಾದ ಕ್ರಮವನ್ನು ಖಂಡಿಸಿದ ಅವರು, ‘ಇಂಥ ಅತಿರೇಕದ ಕೃತ್ಯಗಳನ್ನು ಚೀನಾ ಬಿಡಬೇಕು. ಭಾರತದೊಂದಿಗೆ ರಚನಾತ್ಮಕ ಮಾತುಕತೆ ನಡೆಸಿ, ಪೂರ್ವ ಲಡಾಖ್‌ನಲ್ಲಿನ ಸಂಘರ್ಷವನ್ನು ಶಮನ ಮಾಡಲು ಮುಂದಾಗಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.