ADVERTISEMENT

ರಾಹುಲ್‌ ಗಾಂಧಿ ಎಡಪಕ್ಷಗಳ ಎದುರು ಸ್ಪರ್ಧಿಸಿರುವುದು ದುರದೃಷ್ಟಕರ: ಯೆಚೂರಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 10:52 IST
Last Updated 11 ಮೇ 2019, 10:52 IST
   

ನವದೆಹಲಿ: ರಾಹುಲ್‌ ಗಾಂಧಿ ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಸ್ಪರ್ಧೆ ಮಾಡಿರುವುದು ದುರದೃಷ್ಟಕರಎಂದು ಸಿಪಿಐ(ಎಂ) ಪಕ್ಷದ ಪ್ರಧಾನಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.

ಕೇರಳದ ವಯನಾಡ್ಲೋಕಸಭಾ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಎಡಪಕ್ಷಗಳ ಎದುರು ಸ್ಪರ್ಧೆ ಮಾಡಿರುವುದು ಒಂದು ರೀತಿಯಲ್ಲಿ ನಿಮಗೆ ಮುಖಭಂಗವಾದಂತಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಯೆಚೂರಿ, ಇದು ದುರದೃಷ್ಟಕರ, ನಿಮ್ಮ ಅಜ್ಜಿ ಮತ್ತು ತಾಯಿ ಕರ್ನಾಟಕದಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ. ನೀವು ಅಲ್ಲಿಂದ ಸ್ಪರ್ಧೆ ಮಾಡಿ ಎಂದು ರಾಹುಲ್ ಗಾಂಧಿಗೆ ಸಲಹೆ ಮಾಡಲಾಗಿತ್ತು ಎಂದುಹಿಂದೂಸ್ತಾನ್‌ ಟೈಮ್ಸ್‌ಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಜೆಪಿಯನ್ನು ಸೋಲಿಸಬೇಕು ಎನ್ನುವ ನೀವು ಕೇರಳದಲ್ಲಿ ಎಡಪಕ್ಷಗಳನ್ನು ಸೋಲಿಸಲು ಮುಂದಾಗಿರುವುದರ ಹಿಂದಿನ ನಿಮ್ಮ ನಿಲುವು ಏನುಎಂದು ಸೀತಾರಾಂ ಯೆಚೂರಿ ಪ್ರಶ್ನೆ ಮಾಡಿದ್ದಾರೆ.

ADVERTISEMENT

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿದ್ದು ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಯೆಚೂರಿತಿಳಿಸಿದ್ದಾರೆ.

ಯುಪಿಎ–1ರಲ್ಲಿ ಅನುಷ್ಠಾನಗೊಂಡ ಕಲ್ಯಾಣ ಯೋಜನೆಗಳು ಎಡಪಕ್ಷಗಳ ಒತ್ತಡದಿಂದ ಆದ ಕೆಲಸಗಳು. ನರೇಗಾ, ಆಹಾರ ಭದ್ರತೆ ಮತ್ತು ನೂತನ ಭೂಸ್ವಾಧೀನ ಕಾಯ್ದೆಯಲ್ಲಿ ನಮ್ಮ ಪಾತ್ರ ಸಾಕಷ್ಟಿದೆ ಎಂದು ಯೆಚೂರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.