ADVERTISEMENT

ನಿರುದ್ಯೋಗಿ ದಿನವಾಗಿ ಮೋದಿ ಜನ್ಮದಿನ ಆಚರಣೆ

ಪಿಟಿಐ
Published 17 ಸೆಪ್ಟೆಂಬರ್ 2022, 11:14 IST
Last Updated 17 ಸೆಪ್ಟೆಂಬರ್ 2022, 11:14 IST
ನಿರುದ್ಯೋಗ ಸಮಸ್ಯೆ ಕುರಿತು ಸರ್ಕಾರದ ಗಮನಸೆಳೆಯಲು ನವದೆಹಲಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಾಂಕೇತಿಕವಾಗಿ ಪಾನಿಪೂರಿ ಮಾರಾಟ ಮಾಡಿದರು –ಪಿಟಿಐ ಚಿತ್ರNew Delhi: Members of Indian Youth Congress during a protest on unemployment in New Delhi, Saturday, Sept. 17, 2022. (PTI Photo)(PTI09_17_2022_000086B)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಭಾರತೀಯ ಯುವ ಕಾಂಗ್ರೆಸ್ ಘಟಕವು ಶನಿವಾರ ದೇಶದಾದ್ಯಂತ ನಿರುದ್ಯೋಗ ದಿನವಾಗಿ ಆಚರಿಸಿದೆ.

ನಿರುದ್ಯೋಗ ಸಮಸ್ಯೆ ಕುರಿತು ಗಮನಸೆಳೆಯಲು ಕಾಂಗ್ರೆಸ್‌ ಯುವಘಟಕದ ಕಾರ್ಯಕರ್ತರು, ಕಪ್ಪು ಬಣ್ಣದ ಟೀಶರ್ಟ್ ಧರಿಸಿ ಭಾಗವಹಿಸಿದ್ದು, ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಶನಿವಾರ ಮೋದಿ ಅವರ 72ನೇ ಜನ್ಮದಿನವಾಗಿತ್ತು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರು, ಬಿಜೆಪಿ ನೇತೃತ್ವದ ಸರ್ಕಾರವು ಯುವಜನರಿಗೆ ನಿರುದ್ಯೋಗದ ಉಡುಗೊರೆ ನೀಡಿದೆ ಎಂದು ಟೀಕಿಸಿದರು.

ADVERTISEMENT

ಸದ್ಯ ದೇಶದಲ್ಲಿ ಶೇ 60ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ ಅದನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.