ಜಮ್ಮು: ಕಳೆದ ವರ್ಷ ಶೋಪಿಯಾನ್‌ನಲ್ಲಿ ಭಯೋತ್ಪಾದರ ದಾಳಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸುನಿಲ್ ಪಂಡಿತ್ ಅವರ ಪತ್ನಿ ಸುನೀತಾ ಪಂಡಿತ್ ಅವರಿಗೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶನಿವಾರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಇಲ್ಲಿನ ರಾಜಭವನದಲ್ಲಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಈ ನೇಮಕಾತಿ ಪತ್ರ ನೀಡಲಾಯಿತು.
ಕಳೆದ ವರ್ಷ ಆಗಸ್ಟ್ 16 ರಂದು ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಸುನಿಲ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಈ ದಾಳಿಯಲ್ಲಿ ಆತನ ಸಹೋದರನೂ ಗಾಯಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.