ADVERTISEMENT

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಜೈಲೇ ಸರಿಯಾದ ಸ್ಥಳ: ಚಿರಾಗ್ ಪಾಸ್ವಾನ್

ಏಜೆನ್ಸೀಸ್
Published 26 ಅಕ್ಟೋಬರ್ 2020, 6:53 IST
Last Updated 26 ಅಕ್ಟೋಬರ್ 2020, 6:53 IST
ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್
ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್   

ಪಟ್ನಾ: ಬಿಹಾರ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿರುವಾಗಲೇ ರಾಜ್ಯದಲ್ಲಿ ರಾಜಕೀಯ ನಾಯಕರ ವಾಗ್ದಾಳಿಗಳು ತಾರಕಕ್ಕೇರಿದ್ದು, ಲೋಕ ಜನಶಕ್ತಿ ಪಕ್ಷದ (ಎಲ್‍ಜೆಪಿ) ನಾಯಕ ಚಿರಾಗ್ ಪಾಸ್ವಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿಗೆ 'ಜೈಲು ಸರಿಯಾದ ಸ್ಥಳ' ಎಂದು ನಾನು ನಂಬಿದ್ದೇನೆ. 'ನಿತೀಶ್ ಕುಮಾರ್ ಅವರು ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ' ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಐದು ವರ್ಷಗಳ ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣರಾದವರನ್ನು ಜೈಲಿಗೆ ಹಾಕುವ ಭರವಸೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಚಿರಾಗ್, ಒಂದು ವೇಳೆ ಅವರು ತಪ್ಪಿತಸ್ಥರಾಗಿದ್ದರೆ, ತನಿಖೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ನಾನು ಹೇಳಿದೆ. ದೊಡ್ಡ ಪ್ರಮಾಣದ ಹಗರಣಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗೆ ತಿಳಿದಿಲ್ಲ ಎಂಬುದು ಹೇಗೆ ಸಾಧ್ಯ? ಅವರು ಅದರಲ್ಲಿ ಭಾಗಿಯಾಗಿದ್ದಾರೆ. ಇಲ್ಲದಿದ್ದರೆ ಅದು ತನಿಖೆಯಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಅವರು ಭಾಗಿಯಾಗಿದ್ದಾರೆ, ಅವರು ಭ್ರಷ್ಟರಾಗಿದ್ದಾರೆ ಮತ್ತು ಯಾವುದೇ ಭ್ರಷ್ಟಾಚಾರಿಯಾದರೂ ಆತ ಜೈಲಿಗೆ ಸೇರಿದವನು ಎಂದು ಜನರು ಮತ್ತು ನಾನು ನಂಬಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

ಯಾವುದೇ ಭ್ರಷ್ಟ ನಾಯಕನನ್ನು ಮುಕ್ತವಾಗಿ ತಿರುಗಾಡಲು ಬಿಡಬಾರದು. ನಿತೀಶ್ ಕುಮಾರ್ ಅವರಿಗೆ ಜೈಲು ಸರಿಯಾದ ಸ್ಥಳ ಎಂದು ನಿತೀಶ್ ಕುಮಾರ್ ಅವರ ಪಕ್ಷದೊಂದಿಗೆ ಹೋರಾಡಲು ಮಾತ್ರ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್‌ಜೆಪಿ ಪಕ್ಷದ ಸಂಸದ ತಿಳಿಸಿದ್ದಾರೆ.

ಅವರು ಮದ್ಯ ನಿಷೇಧವನ್ನು ಏಕೆ ಪರಿಶೀಲಿಸಲಾಗುವುದಿಲ್ಲ? ಬಿಹಾರದಲ್ಲಿ ಮದ್ಯ ಕಳ್ಳಸಾಗಣೆದಾರರು ಇಲ್ಲವೇ? ಬಿಹಾರಕ್ಕೆ ಆಲ್ಕೋಹಾಲ್ ಕಳ್ಳಸಾಗಣೆ ಇಲ್ಲವೇ? ಇಡೀ ರಾಜ್ಯ ಸರ್ಕಾರವೇ ಮದ್ಯ ಕಳ್ಳಸಾಗಣೆಯಲ್ಲಿ ಸಂಬಂಧ ಹೊಂದಿದೆ. ಆದರೆ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯುನಲ್ಲಿ ಮಾತ್ರ ಯಾರೊಬ್ಬರಿಗೂ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. #nitishmuktBihar (ನಿತೀಶ್ ಮುಕ್ತ ಬಿಹಾರ) ಎನ್ನುವ ಹ್ಯಾಷ್‌ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.