ADVERTISEMENT

ಮಹಾರಾಷ್ಟ್ರ: ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಆಸ್ಪತ್ರೆಗೆ ದಾಖಲು

ಪಿಟಿಐ
Published 27 ಮೇ 2022, 13:42 IST
Last Updated 27 ಮೇ 2022, 13:42 IST
ಅನಿಲ್‌ ದೇಶಮುಖ್‌
ಅನಿಲ್‌ ದೇಶಮುಖ್‌   

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್‌ ದೇಶಮುಖ್‌ ಅವರು ಅಧಿಕ ರಕ್ತದೊತ್ತಡ ಹಾಗೂ ಎದೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಸಹಾಯಕ ತಿಳಿಸಿದ್ದಾರೆ.

‌‘ದೇಶಮುಖ್‌ ಅವರು ಅನಿಯಂತ್ರಿತ ರಕ್ತದೊತ್ತಡ ಹಾಗೂ ಎದೆ ನೋವಿನಿಂದ ಬಳಲುತ್ತಿದ್ದರು. ಮೇ 25ರಂದು ಕೆಇಎಮ್‌ ಆಸ್ಪತ್ರೆಯ ಐಸಿಯುಗೆ ದೇಶಮುಖ್‌ ದಾಖಲಾಗಿದ್ದಾರೆ’ ಎಂದು ಸಹಾಯಕ ಮಾಹಿತಿ ನೀಡಿದ್ದಾರೆ.

ಅನಿಲ್‌ ದೇಶಮುಖ್‌ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 2021ರ ನವೆಂಬರ್‌ನಲ್ಲಿ ಬಂಧಿಸಿತ್ತು. ಇದೇ ತಿಂಗಳ ಆರಂಭದಲ್ಲಿ, ಭುಜದ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿ ದೇಶಮುಖ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿ, ರಾಜ್ಯ ಸರ್ಕಾರದ ಜೆ.ಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.